Breaking NewsLatestಮೈಸೂರುರಾಜ್ಯ
ಕೆಆರ್ಎಸ್: ಸ್ಪಷ್ಟನೆ ನೀಡಬೇಕಾದ ಸಿಎಂ ಏಕೆ ಮೌನವಾಗಿದ್ದಾರೆ?; ಎಚ್ ವಿಶ್ವನಾಥ್ ಪ್ರಶ್ನೆ

ಮೈಸೂರು: ರಾಜ್ಯದ ಮುಖ್ಯಮಂತ್ರಿಗಳಿಗೆ ಟೆಂಡರ್, ಕಿಕ್ಬ್ಯಾಕ್, ಕಮಿಷನ್ ಪಡೆಯುವುದರಲ್ಲಿ ಇರುವ ಆಸಕ್ತಿ ಕೆಆರ್ಎಸ್ ಉಳಿಸುವುದರಲ್ಲಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ವಿಚಾರವಾಗಿ ಇಷ್ಟೊತ್ತಿಗೆ ಸಿಎಂ ಅವರೇ ಸ್ಪಷ್ಟನೆ ನೀಡಿ, ಜನರ ಆತಂಕ ನಿವಾರಣೆ ಮಾಡಬೇಕಿತ್ತು. ಆದರೆ, ಅವರು ಸುಮ್ಮನಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿರುಕು ಬಿಟ್ಟಿದೆ ಎಂದು ತಜ್ಞರು ಹೇಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಅಕ್ರಮ ಗಣಿಗಾರಿಕೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿ ನೀಡಲಿ ಎಂದು ಆಗ್ರಹಿಸಿದರು.
