Latestಜಿಲ್ಲಾ ಸುದ್ದಿಮೈಸೂರುರಾಜಕೀಯ

ಕುಮಾರಸ್ವಾಮಿ ಯಾರ್ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂಬುದು ಗೊತ್ತು: ಧ್ರುವನಾರಾಯಣ್

ಮೈಸೂರು ; 2018ರಲ್ಲಿ ಸಮ್ಮಿಶ್ರ ಸರ್ಕಾರದ (Coalition Governmen) ಅಧಿಕಾರದಲ್ಲಿದ್ದಾಗ ಯಾರ್ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂಬುದು ಅವರಿಗೆ ಗೊತ್ತು. ಆ ಸಂದರ್ಭದಲ್ಲಿ ಎರಡು ಪಕ್ಷದ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆ ಕಾರಣಕ್ಕಾಗಿ ಅಧಿಕಾರ ಕಳೆದುಕೊಂಡರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ (dhruvanarayana) ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumarswamy) ಯಾರ್ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂಬುದು ಅವರಿಗೆ ಗೊತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ 5 ವರ್ಷ ಸಿಎಂ ಆಗಿ ಇರಬಹುದಿತ್ತು ಎಂದರು.

ಚುನಾವಣೆಗಳಲ್ಲಿ ಜೆಡಿಎಸ್ ಸತತ ಸೋಲಿನಿಂದ ಕುಮಾರಸ್ವಾಮಿ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಉತ್ತರ ಕರ್ನಾಟಕ (North Karnataka) ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ (Karnataka) ಕಾಂಗ್ರೆಸ್ ಪರ ಅಲೆ ಇದೆ. ವಿಧಾನ ಪರಿಷತ್ ಚುನಾವಣೆ (MLC Election) ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ (Local Body Election) ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದೆ. ಕಳೆದ ಬಾರಿ ಸೋತ ಕಡೆ ಈ ಬಾರಿ ಗೆಲುವು ಸಾಧಿಸಿದ್ದೇವೆ. ಜನರು ಬಿಜೆಪಿ ಆಡಳಿತದಿಂದ ಬೇಸತ್ತು ಕಾಂಗ್ರೆಸ್ (Congress) ಕಡೆ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಬಹುಮತ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಬಿಜೆಪಿ ಸರ್ಕಾರ (BJP Government) ದೇವಾಲಯದ ಬಗ್ಗೆ ನೂತನ ಕಾಯ್ದೆ (New Act) ಮಾಡುವ ಮೂಲಕ ಜನರನ್ನು ಬಕ್ರಾ ಮಾಡಲು ಹೊರಟಿದೆ. ಬಿಜೆಪಿ ಯಾವಾಗಲೂ ಹಿಡನ್ ಅಜೆಂಡಾ (Hidden Agenda) ಹೊಂದಿರುವ ಪಕ್ಷವಾಗಿದೆ. ಆರ್​​​ಎಸ್​​​ಎಸ್ (RSS) ಹೇಳಿದಂತೆ ಕೇಳುತ್ತದೆ ಎಂದು ಹೇಳಿದರು.

ಈಗಿರುವ ಮುಜರಾಯಿ ಇಲಾಖೆ ದೇವಾಲಯಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅದರಲ್ಲಿ ಹೊಸ ಕಾಯ್ದೆಯ ಅವಶ್ಯಕತೆ ಏನಿತ್ತು ಎಂದು ಟೀಕಿಸಿದರು.

ಸಂಸದ ಪ್ರತಾಪ್ ಸಿಂಹ (Pratap simha) ಹನುಮನ ಪಾದಯಾತ್ರೆ, ರಾಮನ ಪಾದಯಾತ್ರೆ ಹೆಸರಿನಲ್ಲಿ ಬ್ಯೂಸಿ ಇದ್ದಾರೆ. ಮಠ ಮತ್ತು ಧರ್ಮದ ಹೆಸರಿನಲ್ಲಿ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ. ಇದು ಜನರಿಗೆ ಗೊತ್ತಾಗಿದೆ. ಇವರ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ನಾಟಕ‌ ಆಡುತ್ತಾರೆ ಎಂದು ವ್ಯಂಗ್ಯವಾಡಿದರು.

ಜನವರಿ 3ರಂದು ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜನವರಿ 9 ರಿಂದ 19ರವರೆಗೆ ನಡೆಯಲಿರುವ ಮೇಕೆದಾಟು (Mekedatu) ಪಾದಯಾತ್ರೆಗೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಮಾವೇಶ ನಡೆಯಲಿದೆ ಎಂದು ಧೃವನಾರಾಯಣ್ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button