Breaking NewsLatestಜಿಲ್ಲಾ ಸುದ್ದಿಮೈಸೂರುರಾಜಕೀಯ

ಕಾಂಗ್ರೆಸ್ ಟೀಕಿಸಲು ಬಿಜೆಪಿಯಿಂದ ಹೆಚ್ಡಿಕೆ ಸುಪಾರಿ ಪಡೆದಿದ್ದಾರೆ: ಲಕ್ಷ್ಮಣ್ ಆರೋಪ

ಮೈಸೂರು: ಬಿಜೆಪಿ ವಿರುದ್ದ ಕಾಂಗ್ರೆಸ್ ಮಾತಾಡಿದರೆ ಅದಕ್ಕೆ ಜೆಡಿಎಸ್‌ನವರು ಉತ್ತರ ಕೊಡುತ್ತಾರೆ. ಕಾಂಗ್ರೆಸ್‌ ಟೀಕಿಸಲು ಬಿಜೆಪಿಯಿಂದ ಹೆಚ್‌.ಡಿ.ಕುಮಾರಸ್ವಾಮಿ ಸುಪಾರಿ ಪಡೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 26 ಜಲಾಶಯಗಳಿವೆ. 21 ಜಲಾಶಯ ಕಟ್ಟಿದ್ದು ಕಾಂಗ್ರೆಸ್ ಆದರೆ ಒಂದು ಜಲಾಶಯವನ್ನು ಮೈಸೂರು ಅರಸರು ಕಟ್ಟಿದ್ದಾರೆ. ಇನ್ನೂ 4 ಜಲಾಶಯ ಕಟ್ಟಿದ್ದು ಬ್ರಿಟಿಷರು. ಹಾಗಾದರೆ ಹೆಚ್‌ ಡಿ ದೇವೇಗೌಡರ ಕೊಡುಗೆ ಏನು? ದೇವೇಗೌಡರು ಒಂದು ಡ್ಯಾಂ ಆದರೂ ಕಟ್ಟಿದ್ದಾರಾ ? ಬಿಜೆಪಿ ಆಡಳಿತದಲ್ಲಿ ಒಂದು ಡ್ಯಾಂ ಕಟ್ಡಿದ್ದಾರಾ ಎಂದು ಎಂ.ಲಕ್ಣ್ಮಣ್ ಪ್ರಶ್ನೆ ಮಾಡಿದ್ದಾರೆ.

ಮೇಕೆದಾಟು 66 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ವಿರುವ ಜಲಾಶಯದ ಯೋಜನೆ. ಸುಪ್ರೀಂ ಕೋರ್ಟ್ ಆಯಾ ರಾಜ್ಯದ ನೀರನ್ನ ಆಯಾ ರಾಜ್ಯವೆ ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದೆ. ಇದಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಮಾತ್ರ ಬೇಕು. 5 ಎಕರೆ ಜಾಗವನ್ನು ಅರಣ್ಯದ ಬದಲಾಗಿ ಬೇರೆಡ ಜಾಗ ನೀಡಬೇಕಿದೆ. ಇದಕ್ಕೂ ಸಿದ್ದರಾಮಯ್ಯ ಸರ್ಕಾರ ಡಾಂಡೇಲಿ ಮುಂತಾದ ಕಡೆ ಜಾಗ ನೀಡವುದಾಗಿ ಒಪ್ಪಿಗೆ ನೀಡಿತ್ತು ಎಂದರು.

ಕುಮಾರಸ್ವಾಮಿ ಕಾವೇರಿ ನೀರಾವರಿ ಯೋಜನೆ ತಂದಿದ್ದು ದೇವೇಗೌಡರು ಎನ್ನುತ್ತಿದ್ದೀರಿ. 1974 ರಲ್ಲಿ ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದರು. ಆಗ ನೀರವಾರಿ ಯೋಜನೆ ಆಗಿದ್ದು. ದೇವೆಗೌಡರ ಬಗ್ಗೆ ನಮಗೆ ಗೌರವ ಇದೆ. ಸಿದ್ದರಾಮಯ್ಯ ಸರ್ಕಾರ ಅವದಿಯ ಯೋಜನೆ ನಾವು ಹೇಳ್ತೇವೆ. ನೀವು ಯಾವ ನೀರಾವರಿ ಯೋಜನೆ ಮಾಡಿದ್ದೀರಿ ಹೇಳಿ. ಡಿಕೆ ಶಿವಕುಮಾರ್ ಸಮಾವೇಶ ಮಾಡುತ್ತಾ ಇರುವುದರಿಂದ ಒಕ್ಕಲಿಗರ ಮತ ಸಿಗಲ್ಲ ಅಂತ ಕಾಂಗ್ರೆಸ್ ಮೇಲೆ ಆರೋಪಗಳನ್ನ ಮಾಡುತ್ತಿದ್ದೀರಿ ಎಂದು ಲಕ್ಷ್ಮಣ್ ಜೆಡಿಎಸ್ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button