Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡದಲ್ಲಿ ಎಂಇಎಸ್ ಬ್ಯಾನ್‌ಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ಧಾರವಾಡ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪದೇ ಪದೇ ಕ್ಯಾತೆ ತೆಗೆದು ಅಶಾಂತಿ ಸೃಷ್ಟಿ ಮಾಡುತ್ತಿರುವ ಹಾಗೂ ದುಷ್ಕ್ರತ್ಯ ಮಾಡುತ್ತಿರುವ ಎಂಇಎಸ್ (MES) ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ, ಧಾರವಾಡದಲ್ಲಿ (Dharwad) ಕರ್ನಾಟಕ ರಕ್ಷಣಾ (Karave) ವೇದಿಕೆಯ ಕಾರ್ಯಕರ್ತರು ರಾಜ್ಯಪಾಲರಿಗೆ (Governor) ಪತ್ರ ಬರೆಯುವ ಮೂಲಕ‌ ಪ್ರತಿಭಟನೆ (Protest) ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ನಗರದ ಹೆಡ್ ಪೋಸ್ಟ್‌ ಕಚೇರಿಯ ಬಳಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ರೈತ ಘಟಕದ ಅಧ್ಯಕ್ಷ ಪಾಪು ಧಾರೆ ನೇತೃತ್ವದಲ್ಲಿ, ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಾಜ್ಯದಿಂದ ಎಂಇಎಸ್ ಬ್ಯಾನ ಮಾಡುವಂತೆ ಬರೆದ ಪತ್ರಗಳನ್ನು (Latter Movement) ರಾಜ್ಯದ ರಾಜ್ಯಪಾಲರಿಗೆ ಪೋಸ್ಟ್ ಮಾಡಿ ಒತ್ತಾಯ ಮಾಡಿದರು.

ಎಂಇಎಸ್ ಪುಡಾರಿಗಳ ಸಂಘಟನೆಯಾಗಿದ್ದು, ರಾಜ್ಯದ ಅಣ್ಣ, ಗಾಳಿ, ಜೊತೆಗೆ ಇಲ್ಲಿನ ಸರ್ಕಾರ ನೀಡುವ ಮೂಲಭೂತ ಸೌಕರ್ಯಗಳ ಪಡೆದು ಗಡಿಭಾಗ ಜಿಲ್ಲೆಯಲ್ಲಿ (Border Districts) ಅಶಾಂತಿ ಸೃಷ್ಟಿ ಮಾಡುತ್ತಲೇ ಬರುತ್ತಿದೆ. ಕನ್ನಡ ರಾಜ್ಯೋತ್ಸವ (Kannada Rajyostav) ಹಾಗೂ ಬೆಳಗಾವಿ ಅಧಿವೇಶನ belagav ನಡೆಯುವ ಸಂದರ್ಭದಲ್ಲಿ ಪದೇ ಒದೇ ಕ್ಯಾತೆ‌ ತೆಗೆಯುತ್ತಲ್ಲೇ ಬರುತ್ತಿದೆ.‌ಅಲ್ಲದೆ ಇತ್ತಿಚೆಗೆ ಬೆಳಗಾವಿಯಲ್ಲಿ (Belagavi) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ (Sangaolli Rayanna Statue) ಭಗ್ನ ಮಾಡಿದ್ದಾರೆ. ಹಾಗಾಗಿ ಇವರನ್ನು ಬ್ಯಾನ್ (Ban) ಮಾಡುವುದೇ ಉತ್ತಮವಾಗಿದೆ. ಈ ಕೂಡಲೇ ರಾಜ್ಯಪಾಲರು ರಾಜ್ಯದಿಂದ ಎಂಇಎಸ್ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು‌‌ ಎಂದು ಅಗ್ರಹಿಸಿದರು.‌

ಎಂಇಎಸ್ ಬ್ಯಾನ್ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಪರಿಶೀಲನೆ ಮಾಡುವುದಾಗಿ ಹೇಳುತ್ತಿದ್ದಾರೆ. ಬೇಗನೇ ಪರಿಶೀಲನೆ ಕೈಗೊಂಡು ಎಂಇಎಸ್ ಪುಂಡಾರಿಗಳಿಗೆ ಬ್ಯಾನ್ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಇದೇವೇಳೆ ಒತ್ತಾಯಿಸಿದರು. ‌

Spread the love

Related Articles

Leave a Reply

Your email address will not be published. Required fields are marked *

Back to top button