
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಜನಪ್ರಿಯ ಕಾರ್ಯಕ್ರಮ ಆಕಾಶವಾಣಿಯ ಮನ್ ಕಿ ಬಾತ್ ಇದೇ 30 ರಂದು ಬಿತ್ತರವಾಗಲಿದೆ. ಆಕಾಶವಾಣಿ ಮೂಲಕ ದೇಶ-ವಿದೇಶಗಳ ಜನತೆಯ ಜೊತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ.
ಸಾರ್ವಜನಿಕರು ಮೂಲಕ ನಮೋ ಆ್ಯಪ್ ಮೂಲಕ ಸಂದೇಶ ಕಳುಹಿಸಬಹುದಾಗಿದೆ. ಕನ್ನಡವಲ್ಲದೆ ದೂರವಾಣಿ ಕರೆಗಳ ಮೂಲಕ ಧ್ವನಿ ಸಂದೇಶಗಳನ್ನು ರವಾನಿಸಬಹುದಾಗಿದೆ.
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ಕಳೆದ 7 ವರ್ಷಗಳಿಂದಲೂ ಆಕಾಶವಾಣಿಯಲ್ಲಿ ತಿಂಗಳ 4ನೇ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನತೆಯೊಂದಿಗೆ ತಮ್ಮ ಚಿಂತನೆ ಹಂಚಿಕೊಳ್ಳುತ್ತಿದ್ದಾರೆ.



