ಪಾಕಿಸ್ತಾನದಲ್ಲಿ ಬಿದ್ದ ಮಿಸೈನ್ ನಮ್ಮದೆ ಎಂದ ಭಾರತ: ರಕ್ಷಣಾ ಇಲಾಖೆ ಸ್ಪಷ್ಟನೆ

ನವದೆಹಲಿ: ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಪತನವಾಗಿದ್ದ ಮಿಸೈಲ್ ನಮ್ಮದೇ ಎಂದು ಭಾರತ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ.
ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಹಾರಿದ್ದು, ಅದು ಪಾಕಿಸ್ತಾನದ ಪ್ರದೇಶದಲ್ಲಿ ಪತನವಾಗಿದೆ. ಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ವಿಚಾರಣೆಗೆ ಆದೇಶಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ನಷ್ಟವಾಗಿಲ್ಲ ಎಂಬುದು ಸಮಾಧಾನದ ವಿಷಯ ಎಂದು ರಕ್ಷಣಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆ ವಿವರ
ಭಾರತದ ವಿರುದ್ಧ ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ. ಭಾರತಕ್ಕೆ ಸೇರಿದ ಸೂಪರ್ ಸಾನಿಕ್ ಮಿಸೈಲ್ ನಮ್ಮ ಗಡಿಯಲ್ಲಿ ಬಿದ್ದಿದೆ ಎಂದು ಪಾಕಿಸ್ತಾನ ಪ್ರಕಟಣೆ ಬಿಡುಗಡೆ ಮಾಡಿದೆ. ಜೊತೆಗೆ ಇದು ಶಾಂತಿಯ ಉಲ್ಲಂಘನೆ ಆಗುತ್ತದೆ, ಇದರ ಮೇಲೆ ಭಾರತ ವಿವರಣೆಯನ್ನು ನೀಡಬೇಕು ಎಂದು ಪಾಕಿಸ್ತಾನ ತಿಳಿಸಿತ್ತು.
ಬುಧವಾರ ಸಂಜೆ ಹರಿಯಾಣದ ಸಿನ್ರಾ ಪ್ರದೇಶದಿಂದ ಸೂಪರ್ ಸಾನಿಕ್ ಮಿಸೈಲ್ ಪಾಕಿಸ್ತಾನದ ಗಡಿ ಪ್ರದೇಶದಿಂದ ಸುಮಾರು 124 ಕಿಮೀ ದೂರದಲ್ಲಿ ಬಂದು ಪತನವಾಗಿದೆ. ನಾಗರೀಕ ವಿಮಾನಗಳು ಹಾರಾಟ ಮಾಡುವ ಎತ್ತರದಲ್ಲೇ ಮಿಸೈಲ್ ಹಾರಿ ಬಂದಿದ್ದು ಜನ ವಸತಿ ಇರೋ ಪ್ರದೇಶದಲ್ಲಿ ಪತನವಾಗಿದೆ ಎಂದು ಪಾಕಿಸ್ತಾನ ತಿಳಿಸಿತ್ತು.
