
ಮುಂಬೈ: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ 5 ಕೋಟಿ ರೂ. ಬೆಲೆಯ ಎರಡು ವಾಚ್ ಗಳನ್ನು ಮುಂಬೈಯ ಕಸ್ಟಮ್ಸ್ ಅಧಿಕಾರಿಗಳು ವಷಪಡಿಸಿಕೊಂಡಿದ್ದಾರೆ.
ಕಳೆದ ಬಾರಿಯೂ ಐಪಿಎಲ್ ಮುಗಿದ ನಂತರ ಪಾಂಡ್ಯ ಸಹೋದರರು ಚಿನ್ನ ಸಾಗಿಸುತ್ತಿರುವಾಗ ಕಸ್ಟಮ್ಸ್ ಅಧಿಕಾರಿಗಳ ಗಮನಕ್ಕೆ ಬಂದಿರುವುದು ಸುದ್ದಿಯಾಗಿತ್ತು. ವಿಚಾರಣೆ ವೇಳೆ ಖರೀದಿಗೆ ಸಂಬಂಧಿಸಿದ ಬಿಲ್ ಕೇಳಿದಾಗ ಪಾಂಡ್ಯ ಅವರಲ್ಲಿ ಬಿಲ್ ಇರಲಿಲ್ಲ. ಟಿ20 ವಿಶ್ವಕಪ್ ಮುಗಿಸಿ ತಾಯ್ನಾಡಿಗೆ ಹಿಂದಿರುಗುವಾಗ ನವೆಂಬರ್ 14 ರಂದು ಘಟನೆ ನಡೆದಿದೆ.
ಕಳೆದ ಬಾರಿ ಹಾರ್ದಿಕ್ ಅವರ ಸಹೋದರ ಕ್ರುನಾಲ್ ಪಾಂಡ್ಯ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ದುಬಾರಿ ವಾಚ್ ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.



