Breaking NewsLatestರಾಷ್ಟ್ರೀಯಸುದ್ದಿ

India Covid Updates: ದೇಶದಲ್ಲಿ ಇಂದು 13 ಸಾವಿರ ಕೊರೊನಾ ಕೇಸ್​​ ಪತ್ತೆ

ನವದೆಹಲಿ : ದಿನದಿಂದ ದಿನಕ್ಕೆ ಕೊರೊನಾ ಇಳಿಮುಖ ಕಂಡುಬರುತ್ತಿದ್ದು, ದೇಶದಲ್ಲಿ ಇಂದು 13,405 ಹೊಸದಾಗಿ ಕೋವಿಡ್​​ ಪ್ರಕರಣಗಳು ಪತ್ತೆಯಾಗಿದ್ದು, 235 ಮಂದಿ ಸಾವನ್ನಪ್ಪಿದ್ದಾರೆ.

ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,28,51,929ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 5,12,344ಕ್ಕೆ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,81,075ಕ್ಕೆ ತಲುಪಿದೆ. ಈ ನಡುವೆ 34,226 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 4,21,58,510ಕ್ಕೆ ತಲುಪಿದೆ.

Spread the love

Related Articles

Leave a Reply

Your email address will not be published. Required fields are marked *

Back to top button