Latestಇತರ ಕ್ರೀಡೆಕ್ರೀಡೆ
ಹಾಕಿ: ಫೈನಲ್ ತಲಪುವಲ್ಲಿ ಭಾರತ ವಿಫಲ, ಕಂಚಿಗಾಗಿ ಹೋರಾಟ

ಟೋಕಿಯೋ: ಬೆಲ್ಜಿಯಂ ವಿರುದ್ಧ 2-5 ಅಂತರದಲ್ಲಿ ಸೋಲನುಭವಿಸಿದ ಭಾರತ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ಫೈನಲ್ ತಲಪುವಲ್ಲಿ ವಿಫಲವಾಗಿದೆ.
ಅಲೆಕ್ಸಾಂಡರ್ ಹೆನ್ರಿಕ್ಸ್ ಹ್ಯಾಟ್ರಿಕ್ ಗೋಲು ಗಳಿಕೆಯ ಸಾಧನೆ ಮಾಡುವುದರೊಂದಿಗೆ ಬೆಲ್ಜಿಯಂ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು.
ಭಾರತದ ಪರ ಮನ್ದೀಪ್ ಸಿಂಗ್ ಹಾಗೂ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸಿ ಆರಂಭದಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಆದರೆ ಆ ಉತ್ಸಾಹ ಕೊನೆಯವರೆಗೂ ಉಳಿಯಲಿಲ್ಲ. ನಾಲ್ಕನೇ ಕ್ವಾರ್ಟರ್ ನಲ್ಲಿ ಬೆಲ್ಜಿಯಂ ಮೂರು ಗೋಲುಗಳಿಸಿ ಭಾರತದ ಫೈನಲ್ ಹಾದಿಯನ್ನು ಮುಚ್ಚಿತು.
ಕಂಚಿಗಾಗಿ ಭಾರತ ಆಸ್ಟ್ರೇಲಿಯಾ ಅಥವಾ ಜರ್ಮನಿ ವಿರುದ್ಧ ಸೆಣಸಲಿದೆ.
ಜಾವೆಲಿನ್ ಥ್ರೋ:
ಜಾವೆಲಿನ್ ಎಸೆತದಲ್ಲಿ ಭಾರತದ ಅನ್ನು ರಾಣಿ 54.03 ಮೀ. ದೂರಕ್ಕೆ ಎಸೆದು ಹೀನಾಯ ಪ್ರದರ್ಶನದೊಂದಿಗೆ ಫೈನಲ್ ತಲಪುವಲ್ಲಿ ವಿಫಲರಾಗಿದ್ದಾರೆ.
ಕುಸ್ತಿಯಲ್ಲೂ ಸೋಲಿನ ಖಾತೆ:
ಮಂಗೋಲಿಯಾದ ಬೊಲೊರ್ತುಯಾ ಖುರೆಲ್ಕು ವಿರುದ್ಧ ನಡೆದ ವನಿತೆಯರ 62ಕೆಜಿ ಕುಸ್ತಿ ವಿಭಾಗದಲ್ಲಿ ಭಾರತದ ಸೋನಂ ಮಲಿಕ್ ಸೋಲಿಗೆ ಶರಣಾದರು.



