Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ನನಗೆ ನೀಡಿದ ಜವಾಬ್ದಾರಿ ಬಗ್ಗೆ ನನಗೆ ತೃಪ್ತಿಯಿದೆ: ಸಚಿವ ಮುರುಗೇಶ್ ನಿರಾಣಿ

ಕಲಬುರಗಿ : ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದಕ್ಕೆ ಬಹಳ ಸಂತೋಷವಿದೆ. ಬೇರೆಯವರ ಅಸಮಾಧಾನದ ಬಗ್ಗೆ ನಾನು ಮಾತನಾಡೋದಿಲ್ಲಾ ಅಂತ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಉಸ್ತುವಾರಿ ವಿಚಾರದಲ್ಲಿ ಕೇಲವರಿಗೆ ಅಸಮದಾನ ಇರಬಹುದು ಆದರೆ, ಅವರ ಅಸಮದಾನ ಬಗ್ಗೆ ನಾನು ಮಾತನಾಡಲ್ಲ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ತೃಪ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ಜನರು ಹೆಚ್ಚಿನ ಬೆಂಬಲ ನೀಡ್ತಿದ್ದಾರೆ ಅದು ನನಗೆ‌ ಸಂತೋಷ ತಂದಿದೆ ಎಂದರು.

ಅಸಮಾಧಾನ ಇತುವವರನ್ನು ಸಿಎಂ ಕರೆದು ಮಾತನಾಡುತ್ತಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿಲ್ಲಾ, ಮುಂದಿನ ದಿನದಲ್ಲಿ ಎಲ್ಲ ಜಿಲ್ಲೆಗಳಿಗೆ ಅವಕಾಶ ಸಿಗಲಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಸಿಎಂಗೆ ಮನವಿ ಮಾಡುತ್ತೇನೆ ಎಂದು ಹೇಳಿದ ನಿರಾಣಿ, ರಮೇಶ್ ಜಾರಕಿಹೊಳಿ ಅವರಿಗೆ ವಿಶೇಷ ಶಕ್ತಿಯಿದೆ ಬಹಳ ಒಳ್ಳೆಯ ಮನುಷ್ಯ ಅವರು ಅಂತ ರಮೇಶ ಜಾರಕಿಹೊಳಿ ಪರವಾಗಿ ನಿರಾಣಿ ಗುಣಗಾಣ ಮಾಡಿದರು.

ಇನ್ನು ಪಂಚಮಸಾಲಿ ಪೀಠಕ್ಕೆ ಮಾತ್ರವಲ್ಲಾ ಎಲ್ಲಾ ಪೀಠಕ್ಕೂ ನನ್ನ ಬೆಂಬಲವಿದೆ, ಗೌರವ ಕೂಡಾ ಇದೆ ಎಂದರು

Spread the love

Related Articles

Leave a Reply

Your email address will not be published. Required fields are marked *

Back to top button