Breaking NewsLatestರಾಷ್ಟ್ರೀಯಸಿನಿಮಾಸೆಲೆಬ್ರಿಟಿ

ಹಿಂದಿ ಬಿಗ್​ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿಧನ

ಮುಂಬೈ: ಹಿಂದಿ ಬಿಗ್​ಬಾಸ್ 13ನೇ ಆವೃತ್ತಿಯ ವಿಜೇತ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ ತಾಯಿ ಮತ್ತು ಇಬ್ಬರು ಸಹೋದರಿಯರು ಇದ್ದರು.

ಗುರುವಾರ ಬೆಳಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡ ಬಳಿಕ ಅವರನ್ನು ಮುಂಬೈನ ಆಸ್ಪತ್ರೆಗೆ ದಾಕಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಸಾವಧಾನ್ ಇಂಡಿಯಾ ಮತ್ತು ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮಗಳ ನಿರೂಪಕರಾಗಿದ್ದ ಅವರು, 2005ರ ಡಿಸೆಂಬರ್​ನಲ್ಲಿ ವಿಶ್ವದ ಅತ್ಯುತ್ತಮ ರೂಪದರ್ಶಿ ಮನ್ನಣೆ ಗಳಿಸಿದ್ದರು. ಏಷ್ಯಾ ದಕ್ಷಿಣ ಆಮೆರಿಕಾ ಮತ್ತು ಯೂರೊಪಿನ 40 ಇತರ ರೂಪದರ್ಶಿಗಳ ಜೊತೆಗಿನ ಪೈಪೋಟಿಯಲ್ಲಿ ಅವರು ಈ ಗೌರವ ಪಡೆದಿದ್ದರು.

2008ರಲ್ಲಿ ಬಬುಲ್ ಕಾ ಅಂಗನ್ ಚೂತೇ ನಾ ಚಿತ್ರದಲ್ಲಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಅವರು ನಟನೆ ಆರಂಭಿಸಿದ್ದರು. 2014ರಲ್ಲಿ ಹಂಪ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರ ಬಾಲಿವುಡ್ ಪ್ರವೇಶವಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button