ಹಿಜಾಬ್ , ಕೇಸರಿ ವಿವಾದ : ಅರ್ಜಿ ವಿಚಾರಣೆ ಮಧ್ಯಾಹ್ನ 2.30ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಈ ಸಂದರ್ಭದಲ್ಲಿಯೇ ಕರ್ನಾಟಕ ಹೈಕೋರ್ಟ್ ಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿರುವಂತ ಅರ್ಜಿಯ ವಿಚಾರಣೆ ಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಒಟ್ಟು ಮೂರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಯ ಮುಂದೆ ಅರ್ಜಿದಾರರ ಪರ ವಕೀಲರಾದ ಮೊಹಮ್ಮದ್ ತಾಹಿರ್, ದೇವದತ್ ಕಾಮತ್ ವಾದ ಮಂಡಿಸಿದ್ದಾರೆ.
ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ಕಾರವನ್ನು ಪ್ರತಿನಿಧಿಸಿದ್ದರು. ಬೆಂಗಳೂರಿನಲ್ಲಿ ಅಡಿಷನ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಂ ಅವರು ಸರ್ಕಾರವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ : ರಾಜ್ಯವ್ಯಾಪಿ ವಿಸ್ತರಿಸಿದ ಹಿಜಾಬ್, ಕೇಸರಿ ವಿವಾದ : ಹೈಕೋರ್ಟ್ ನತ್ತ ಎಲ್ಲರ ಚಿತ್ತ
ಎರಡು ತಿಂಗಳು ಹಿಜಾಬ್ ಧರಿಸಲು ಅವಕಾಶ ನೀಡಲಿ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಗ್ಗೆ ಸರ್ಕಾರ ನೂತನ ನೀತಿ ತಯಾರಿಸಲಿ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಖುರಾನ್‌ನಲ್ಲಿರುವ ವಸ್ತ್ರಸಂಹಿತೆ ಬಗ್ಗೆ ಉಲ್ಲೇಖ ನಡೆಯುತ್ತಿದ್ದು, ಕಳೆದ ಒಂದೂವರೆ ಗಂಟೆಯಿಂದ ವಾದ-ಪ್ರತಿವಾದ ನಡೆಯುತ್ತಿದ್ದು, ಇದೀಗ 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
