Breaking NewsLatestಜಿಲ್ಲಾ ಸುದ್ದಿಮೈಸೂರು

ಅದ್ಧೂರಿಯಾಗಿ ನಡೆದ ನಂಜನಗೂಡಿನ ಪಂಚ ಮಹಾರಥೋತ್ಸವ

ಮೈಸೂರು: ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚಮಹಾರಥೋತ್ಸವವು ಇಂದು ಅದ್ದೂರಿಯಾಗಿ ನೆರವೇರಿತು.

ಇಂದು ಬೆಳಗಿನ ಜಾವ 3.30ರಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪಂಚ ಮಹಾರಥೋತ್ಸವ ನೆರವೇರಿತು. ದೇಗುಲದಲ್ಲಿ ವಿಶೇಷ ಪೂಜಾಕೈಂಕರ್ಯಗಳನ್ನು ನಡೆಸಿದ ನಂತರ ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಅವರ ಉತ್ಸವ ಮೂರ್ತಿಯನ್ನು ನವರತ್ನ ಸಹಿತ ಶ್ರೀಕಂಠ ಮುಡಿಧಾರಣೆ ಮಾಡಿ ಪಲ್ಲಕ್ಕಿಯ ಮೂಲಕ ರಥದಲ್ಲಿ ಇರಿಸಲಾಯಿತು.

ಪಂಚರಥಗಳಿಗೆ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ರಥೋತ್ಸವ ಆರಂಭವಾಯಿತು‌. ಈ ಹಿಂದೆ ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆಗೆ ನಂತರ ನಡೆಯುತ್ತಿತ್ತು. ಆದ್ರೆ ಜಾತ್ರೆಯು ಈ ಬಾರಿ ನಸುಕಿನಲ್ಲೆ ನಡೆದರೂ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆದಿರಲಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button