Breaking NewsLatestಬಾಲಿವುಡ್ಮನರಂಜನೆಸಿನಿಮಾ
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಗಂಗೂಬಾಯಿ ಕಾಠಿಯಾವಾಡಿ

ಬಾಲಿವುಡ್ ನಲ್ಲಿ ಭಾರಿ ಸಂಚಲನ ಮೂಡಿಸಿದ್ದ ನಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಧೂಳೆಬ್ಬಿಸಿದೆ.
ಹೌದು ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇದೆ ಶುಕ್ರವಾರ ರಿಲೀಸ್ ಆಗಿದೆ. ಮೊದಲ ದಿನವೇ ಈ ಸಿನಿಮಾ ಸುಮಾರು 7 ಕೋಟಿ ಗಳಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಇದೀಗ ಅಂದುಕೊಂಡಂತೆ ಮೀರಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಮೊದಲ ದಿನವೇ ಬರೋಬ್ಬರಿ 10.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟ್ಟು ಕಲೆಕ್ಷನ್ ಅಂದಾಜು 57 ಕೋಟಿ ರೂ. ಗಳಿಸಿದೆ. ಇನ್ನು ವಾರಾಂತ್ಯಕ್ಕೆ ಸುಮಾರು 100 ಕೋಟಿ ಗಳಿಸುವ ಸಾಧ್ಯತೆ ಇದೆ.
