Latest

3 ತಿಂಗಳಲ್ಲಿ ಇಸ್ರೋದಿಂದ 5 ಉಪಗ್ರಹ ಉಡಾವಣೆ

ಕೊರೊನಾ ವೈರಸ್ ಹಾವಳಿ ಹಾಗೂ ಸತತ ಲಾಕ್​ಡೌನ್​ನಿಂದಾಗಿ ಉಂಟಾದ ವಿಳಂಬದ ಬಳಿಕ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ ನೂತನ ಮುಖ್ಯಸ್ಥ ಡಾ.ಎಸ್.ಸೋಮನಾಥ್ ನೇಮಕವಾಗುತ್ತಿದ್ದಂತೆ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಮುಂಬರುವ ಮೂರು ತಿಂಗಳಲ್ಲಿ ಬಾಹ್ಯಾಕಾಶ ಸಂಸ್ಥೆ ಐದು ಪ್ರಮುಖ ಉಪಗ್ರಹ ಉಡಾವಣೆಗಳನ್ನ ನಡೆಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.


ಫೆಬ್ರವರಿಯಲ್ಲಿ RICAT-1A PSLV C5-2 ನಂತರ OCEANSAT-3 ಬಳಿಕ INS 23ಆನಂದ್ PSLV C-53 ಉಡಾವಣೆಗೊಳ್ಳಲಿದೆ. ಬಳಿಕ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ SSLV-D1 ಮೈಕ್ರೋ 1 SAT ಉಪಗ್ರಹಗಳನ್ನ ಉಡಾವಣೆ ಮಾಡಲಿದೆ. ಇದ್ರ ಜೊತೆಗೆ GSAT-21 ಅನ್ನು ಇಸ್ರೋ ಉಡಾವಣೆ ಮಾಡಲಿದೆ.


ಭಾರತದ ಮೊದಲ ಮಾನವರಹಿತ ಮಿಷನ್ ಗಗನ್​ಯಾನ್ ಕುರಿತು ಸಚಿವರಿಗೆ ತಿಳಿಸಿದ ಸೋಮನಾಥ್, ಕೋವಿಡ್ 19 ಹಾಗೂ ಇತರ ನಿರ್ಬಂಧಗಳಿಂದಾಗಿ ಟೈಮ್​ಲೈನ್​ನಲ್ಲಿ ವಿಳಂಬವಾಗಿದೆ. ಆದರೆ ಈಗ ವಿಷಯಗಳು ಮತ್ತೆ ಟ್ರ್ಯಾಕ್​ಗೆ ಬಿದ್ದಿವೆ. ಜೊತೆಗೆ ಮೊದಲ ಮಾನವರಹಿತ ಮಿಷನ್​ಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ಸಿದ್ದಪಡಿಸಲಾಗುತ್ತಿದೆ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button