Latestಮೆಟ್ರೋರಾಜ್ಯಸುದ್ದಿ

ಒಮಿಕ್ರಾನ್ ತಡೆಗೆ ಮತ್ತಷ್ಟು ಬಿಗಿ ಕ್ರಮ ಅಗತ್ಯ: ಸಚಿವ ಕೆ ಸುಧಾಕರ್

ಬೆಂಗಳೂರು: ಡೆಲ್ಟಾ ರೂಪಾಂತರಿಗಿಂತಲೂ ಹೆಚ್ಚು ತೀವ್ರಗತಿಯಲ್ಲಿ ಹಬ್ಬತ್ತಿರುವ ಕೋವಿಡ್ ಹೊಸ ರೂಪಾಂತರಿ ಒಮಿಕ್ರಾನ್ ಹೊಸ ಸೋಂಕು ತಡೆಗೆ ಮತ್ತಷ್ಟು ಬಿಗಿ ಕ್ರಮದ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಬ್ರಿಟನ್ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ. ವೇಗವಾಗಿ ಹರಡುವ ದೊಡ್ಡದಾದ ಈ ಸೋಂಕನ್ನು ನಾವು ಸಹ ಬಹಳ ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಹೀಗಾಗಿ ಜನರ ಚಲನವಲನಗಳ ಮೇಲೆ ಜಾಗೃತಿ ವಹಿಸಬೇಕು. ಸರ್ಕಾರ ತೆಗೆದುಕೊಳ್ಳುವ ಬಿಗಿ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ವಿದೇಶದಿಂದ ಬಂದವರನ್ನು ವಿಮಾನನಿಲ್ದಾಣದಲ್ಲಿ ಕ್ವಾರಂಟೈನ್ ಮಾಡಲು ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಜೊತೆಗೆ ಸಾಂಸ್ಥಿಕ ಕ್ವಾರಂಟೈನ್ ಅನ್ನು ಆರಂಭಿಸಿಲ್ಲ. ಓಮಿಕ್ರಾನ್ ಪತ್ತೆಯಾಗಲು ಏಳೆಂಟು ದಿನಗಳ ಅವಧಿ ಬೇಕಿಲ್ಲ, ಕೇವಲ ಮೂರು ಅಥವಾ ನಾಲ್ಕು ದಿನಗಳ ವಿಂಡೋ ಅವಧಿಯಲ್ಲೇ ಪತ್ತೆಯಾಗಲಿದೆ ಎಂದು ಸಚಿವರು ಹೇಳಿದರು

Spread the love

Related Articles

Leave a Reply

Your email address will not be published. Required fields are marked *

Back to top button