
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಬೀಜಿಂಗ್ ಮೂಲದ ಬಹುವಿಧ ಹಣಕಾಸು ಸಂಸ್ಥೆ ಎಐಐಬಿ(ಏಷ್ಯನ್ ಇನ್ಪ್ರಾಸ್ಟ್ರಕ್ಚರ್ ಇನ್ವೆಸ್ಮೆಂಟ್ ಬ್ಯಾಂಕ್ )ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಹಣಕಾಸು ಸಂಸ್ಥೆಗೆ ಚೀನಾದ ಹಣಕಾಸು ಇಲಾಖೆಯ ಮಾಜಿ ಸಚಿವರು ಮುಖ್ಯಸ್ಥರಾಗಿರುತ್ತಾರೆ. ಅಚ್ಚರಿಯ ಸಂಗತಿಯೆಂದರೆ ಚೀನಾ ಮೂಲದ ಈ ಬ್ಯಾಂಕ್, ಬೆಂಗಳೂರು ಮೆಟ್ರೋ ಯೋಜನೆಗೆ ಬಹಳ ದೊಡ್ಡ ಮೊತ್ತದ ಸಾಲ ಸೌಲಭ್ಯ ಒದಗಿಸಿದೆ
ಎಐಐಬಿಗೆ ಒಟ್ಟು ಐವರು ಉಪಾಧ್ಯಕ್ಷರಿದ್ದು ಅವರ ಪೈಕಿ ಊರ್ಜಿತ್ ಪಟೇಲ್ ಸಹ ಒಬ್ಬರಾಗಿದ್ದಾರೆ. ಪಟೇಲ್ ಅವರು ಈ ಮೊದಲು ಐಎಂಎಫ್ ಮತ್ತು ದೇಶದ ಪ್ರಮುಖ ವಾಣಿಜ್ಯ ಸಂಸ್ಥೆ ರಿಲಯನ್ಸ್ ನಲ್ಲೂ ಪ್ರಮುಖ ಹುದ್ದೆ ನಿರ್ವಹಿಸಿದ್ದರು.



