Breaking NewsLatestರಾಷ್ಟ್ರೀಯಸುದ್ದಿ

Rohini Court: ದೆಹಲಿ ರೋಹಿಣಿ ಕೋರ್ಟ್​ ಆವರಣದಲ್ಲಿ ಶೂಟೌಟ್: ನಾಲ್ವರ ಸಾವು

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಗುಂಡಿನ ದಾಳಿ ವೇಳೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ ಕೋರ್ಟ್ ನ ರೂಂ ನಂಬರ್ 207ರಲ್ಲಿ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ ಸ್ಟರ್ ಜೀತೇಂದ್ರ ಗೋಗಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇನ್ನು ಪೊಲೀಸರು ಇಬ್ಬರು ಶೂಟರ್ ಗಳನ್ನ ಹೊಡೆದುರುಳಿಸಿದ್ದಾರೆ.

ಹಲವಾರು ಕ್ರಿಮಿನಲ್​ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜಿತೇಂದರ್​ ಗೋಗಿ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನನ್ನು ಇಂದು ನ್ಯಾಯಾಲಯಕ್ಕೆ ಕರೆತರುವ ವಿಷಯ ತಿಳಿಯುತ್ತಿದ್ದಂತೆ ಆತನ ವಿರೋಧಿ ಗುಂಪು ಆತನ ಮೇಲೆ ಹಲ್ಲೆಗೆ ಸಂಚು ರೂಪಿಸಿತು. ವಕೀಲರ ವೇಷ ತೊಟ್ಟು ಬಂದ ವರು ನ್ಯಾಯಾಲಯಕ್ಕೆ ಗೋಗಿ ಬರುತ್ತಿದ್ದಂತೆ ಗುಂಡಿನ ಮಳೆಗರೆದರು. ಈ ವೇಳೆ ತಕ್ಷಣಕ್ಕೆ ಎಚ್ಚೆತ್ತ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿದರು.

ಟಿಲ್ಲು ಗ್ಯಾಂಗ್​ಗೆ ಸೇರಿದ ಕೆಲವು ಮಂದಿ ಈ ದಾಳಿ ನಡೆಸಿದ್ದಾರೆ. ಇದು ಗ್ಯಾಂಗ್​ ವಾರ್​ ಅಲ್ಲ. ಈ ದಾಳಿಯ ವೇಳೆ ಪೊಲೀಸರ ಗುಂಡಿಗೆ ರಾಕೇಶ್​ ಅಸ್ಥಾನಾ (Rakesh Asthana) ಬಲಿಯಾಗಿದ್ದಾನೆ ಎಂದು ರೋಹಿಣಿ ಸಿಡಿಪಿ ಪ್ರಣವ್​ ತಾಯಲ್​ ತಿಳಿಸಿದ್ದಾರೆ.

ಕೊಲೆ, ದರೋಡೆ, ಸುಲಿಗೆ ಸೇರಿದಂತೆ 19 ಪ್ರಕರಣಗಳ ಮೇಲೆ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿ ಕಳೆದ ಏಪ್ರಿಲ್​ನಲ್ಲಿ ಜಿತೇಂದರ್​ ಗೋಗಿಯನ್ನು ಬಂಧಿಸಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button