Breaking NewsLatestಜ್ಯೋತಿಷ್ಯವಾಸ್ತು

ಧನಲಾಭಕ್ಕಾಗಿ ಏನು ಮಾಡಬೇಕು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹಣ ಅನ್ನೋದು ತುಂಬಾ ಮುಖ್ಯ. ಹಣ ಇಲ್ಲದೆ ಜೀವನ ಮಾಡೋದು ತುಂಬಾ ಕಷ್ಟ. ದುಡ್ಡೇ ದೊಡ್ಡಪ್ಪ ಎಂದು ಅಂದುಕೊಳ್ಳುವವರೂ ಬಹಳ ಮಂದಿ. ಶೋಕಿಗೆ ಅಲ್ಲದೇ ಹೋದರೂ ಬದುಕು ಸಾಗಿಸಲು ಬೇಕಾದಷ್ಟು ಹಣ ಇರಬೇಕಾದ ಅನಿವಾರ್ಯತೆ ಇಂದಿನ ದಿನದಲ್ಲಿ ಇದೆ. ಹೀಗಿರುವಾಗ ಧನ ಲಾಭಕ್ಕಾಗಿ ಏನು ಮಾಡಬೇಕು ಗೊತ್ತಾ. ಇಲ್ಲಿದೆ ನೋಡಿ ವಾಸ್ತ್ರು ಶಾಸ್ತ್ರದ ಪರಿಹಾರ

  1. ಧನ ಲಾಭ ಪ್ರಾಪ್ತಿಯಾಗಬೇಕು ಎಂದರೆ ಗೋಪಿ ಚಂದನದ ಒಂಬತ್ತು ತುಂಡುಗಳನ್ನು ತೆಗೆದುಕೊಂಡು ಅವುಗಳನ್ನು ಹಳದಿ ವರ್ಣದ ದಾರದಲ್ಲಿ ಸರದಂತೆ ಕಟ್ಟಿ, ಅದನ್ನು ಬಾಳೆವೃಕ್ಷದಲ್ಲಿ ತೂಗು ಬಿಡಬೇಕು.
  2. ಅಮಾವಾಸ್ಯೆಯ ದಿನದಂದು ಹಳದಿ ವರ್ಣದ ತ್ರಿಕೋನಾಕಾರದ ಧ್ವಜವನ್ನು , ವಿಷ್ಣು ಮಂದಿರದ ಮೇಲೆ ಎತ್ತರದಲ್ಲಿ ಸ್ಥಿರವಾಗಿರುವಂತೆ ಸ್ಥಾಪಿಸಬೇಕು
  3. ಶುಕ್ಲ ಪಕ್ಷದ ಗುರುವಾರದಿಂದ ಪ್ರಾರಂಭಿಸಿ, ನಿತ್ಯ ಪೂಜೆ-ಪಠಣಾದಿಗಳನ್ನು ಮಾಡುತ್ತ, ನಂತರದಲ್ಲಿ ಹಣೆಯಲ್ಲಿ ಕೇಸರಿ ತಿಲಕವನ್ನು ಧರಿಸುತ್ತಿರಬೇಕು.
  4. ಗುರು ಪುಷ್ಯ ಯೋಗದಲ್ಲಿ ಕರಿ ಅರಿಶಿಣಕ್ಕೆ ಸಿಂಧೂರ ಹಾಗೂ ಧೂಪವನ್ನು ಅರ್ಪಿಸಬೇಕು.
  5. ಗುರು ಪುಷ್ಯ ನಕ್ಷತ್ರದಲ್ಲಿ ಗೋರೋಚನವನ್ನು ಬೆಳ್ಳಿಯ ಡಬ್ಬಿಯಲ್ಲಿ ಇರಿಸಬೇಕು.
  6. ಲಕ್ಷ್ಮೀ ಪ್ರಾಪ್ತಿಯ ಇಚ್ಛೆಯಿರುವವರು, ಒಂದು ಲಕ್ಷ ಸಂಖ್ಯೆಯ ಗರಿಕೆಯಿಂದ ಪರಶಿವನಿಗೆ ಪೂಜಾರ್ಚನೆ ಮಾಡಬೇಕು.
  7. ಶುಕ್ರವಾರದಂದು ಶ್ರೀಲಕ್ಷ್ಮಿ ದೇವಿಯ ಮಂದಿರದಲ್ಲಿ, ಸುಗಂಧಿತ ಗುಲಾಬಿ ಅಗರಬತ್ತಿಯನ್ನು ಅರ್ಪಿಸುವುದರಿಂದ ಧನಪ್ರಾಪ್ತಿಯಾಗುತ್ತದೆ.
Spread the love

Related Articles

Leave a Reply

Your email address will not be published. Required fields are marked *

Back to top button