Panjab Assembly Election 2022 : ಫೆಬ್ರವರಿ 20ಕ್ಕೆ ಪಂಜಾಬ್ ಚುನಾವಣೆ ಮುಂದೂಡಿದ ಚುನಾಣಾ ಆಯೋಗ

ನವದೆಹಲಿ : ಫೆಬ್ರವರಿ 14ಕ್ಕೆ ನಿಗದಿಯಾಗಿದ್ದ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 20ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಫೆಬ್ರವರಿ 16ರಂದು ಗುರು ರವಿದಾಸ ಜಯಂತಿ ಇರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಸಬಾರದು. ಯಾಕೆಂದರೆ ಪಂಜಾಬ್ನಿಂದ ಅನೇಕ ಭಕ್ತರು ಉತ್ತರ ಪ್ರದೇಶದ ವಾರಾಣಸಿಗೆ ಹೋಗಬೇಕಾಗುತ್ತದೆ. ಸಿಖ್ ಸಮುದಾಯದ ಭಕ್ತರು ಫೆಬ್ರವರಿ10 ರಿಂದಲೇ ವಾರಣಾಸಿಗೆ ಹೋಗಲು ಶುರು ಮಾಡುತ್ತಾರೆ ಹಾಗಾಗಿ ಚುನಾವಣೆಯನ್ನು ಮುಂದೂಡುವಂತೆ ಆಯೋಗಕ್ಕೆ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರು ಮನವಿ ಮಾಡಿಕೊಂಡ ಬೆನ್ನಲ್ಲೇ ಚುನಾವಣಾ ಆಯೋಗ ಅವರ ಮನವಿಯನ್ನು ಪುರಸ್ಕರಿಸಿದೆ.
ಈ ಬಗ್ಗೆ ಚರ್ಚಿಸಲು ಇಂದು ಚುನಾವಣಾ ಆಯೋಗ ಸಭೆ ನಡೆಸಿತ್ತು. ಇದೀಗ ಪಂಜಾಬ್ ವಿಧಾನಸಭಾ ಚುನಾವಣೆಯನ್ನ ಫೆಬ್ರವರಿ 20ಕ್ಕೆ ಮುಂದೂಡಲಾಗಿದೆ. ಪಂಜಾಬ್ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ದೇಶದಲ್ಲಿ ಪಂಚರಾಜ್ಯ ಚುನಾವಣೆಗೆ ಭಾರೀ ಸಿದ್ಧತೆ ನಡೆಯುತ್ತಿದೆ. ಸದ್ಯ ಅಧಿಕಾರದಲ್ಲಿರುವ ಪಕ್ಷಗಳು ಪುನಃ ಆಡಳಿತ ನಡೆಸಲು ಬೇಕಾದ ಚುನಾವಣಾ ತಯಾರಿ ನಡೆಸಿವೆ. ಇನ್ನು. ಈ ಬಾರಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಅಖಾಡವು ರಣರಂಗವಾಗಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನೇರಾ ಹಣಾಹಣಿ ನಡೆಯುತ್ತಿದೆ. ಇನ್ನು, ಗೋವಾದಲ್ಲಿಯೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧೆ ನಡುವ ಎಎಪಿ ಪಕ್ಷ ಕೂಡ ಭರ್ಜರಿ ಫೈಟ್ ನೀಡುತ್ತಿದೆ.
