Breaking NewsLatestರಾಜಕೀಯರಾಜ್ಯಹುಬ್ಬಳ್ಳಿ - ಧಾರವಾಡ

ಸಿದ್ಧು, ಡಿಕೆಶಿ ಹೇಳುವುದೆಲ್ಲ ಬರೀ ಸುಳ್ಳು: ಈಶ್ವರಪ್ಪ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುವುದೆಲ್ಲ ಬರಿ ಸುಳ್ಳು. ಸಿದ್ಧರಾಮಯ್ಯ ಹಿಂದುಳಿದ ವರ್ಗದವರಿಗೆ ಏನು ಮಾಡಲಿಲ್ಲ. ಸಿದ್ಧರಾಮಯ್ಯನವರು ಬರಿ ಘೋಷಣೆ ಮಾಡಿದ್ದರು. ಆದರೆ ಘೊಇಷಣೆ ಮಾಡಿರುವವು ಯಾವುದನ್ನು ಕಾರ್ಯ ರೂಪಕ್ಕೆ ತರಲಿಲ್ಲ, ಇದರ ಬಗ್ಗೆ ಗ್ರಾಮೀಣ ಭಾಗದ ಜನರು ಸಿದ್ದರಾಮಯ್ಯ ಹಿಂದುಳಿದವರಿಗೆ ಏನೂ ಮಾಡಲಿಲ್ಲ ಎಂದು ಹೇಳುತ್ತಿದ್ದಾರೆ. ಆ ಕೋಪವನ್ನು ಗ್ರಾಮ ಪಂಚಾಯತಿಯ ಸದಸ್ಯರು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ತೀರಿಸಿಕೊಳ್ಳುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ಬಿಜೆಪಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಪ್ರತಿಕ್ರಿಯೆ ನೀಡುದ ಅವರು, ಕಾಂಗ್ರೆಸ್ ನಾಯಕರಿಗೆ ಕೇಳಲು ಬಯಸುವೆ. ಜೊತೆಗೆ ಸಾವಾಲು ಹಾಕುವೆ, ಅವರ ಕಾಲದಲ್ಲಿ ಹಿಂದುಳಿದವರಿಗೆ ಹಾಗೂ ದಲಿತರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ತೋರಿಸಲಿ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಾವು ಏನು ಕೊಡುಗೆ ನೀಡಿದ್ದೇವೆ ಎಮದು ತೋರಿಸುತ್ತೇವೆ. ಈ ಕುರಿತು ಚರ್ಚೆಗೆ ಬೇಕಾದರೂ ಅವರು ಬರಲಿ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರವರಿಗೆ ಬಹಿರಂಗ ಸವಾಲ ಹಾಕಿದರು. ‌

ಸಿದ್ದರಾಮಯ್ಯನವರು ತಮ್ಮ ಬೆಂಬಲಿಗರು, ಹೊಗಳುವ ಭಟ್ಟರ ಮೂಲಕ ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ. ಹೊಗಳುವ ಭಟ್ಟರ ಮೂಲಕ ಹೇಳಿಸಿಕೊಂಡು ಹಿಂದುಳಿದ ನಾಯಕ ಎಂದು ಬಿಂಬಿಸಿಕೊಂಡು ಬರುತ್ತಿದ್ದಾರೆ. ಮೋದಿ ಅವರ ಸಂಪುಟದಲ್ಲಿ 27 ಜನ ಹಿಂದುಳಿದ ದಲಿತರಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಚುನಾವಣೆ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುತ್ತೇವೆ. 15-16 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಉದ್ಯೋಗ ಖಾತ್ರಿ ಯೋಜನೆಗೆ ಎರಡನೇ ಹಂತದ ಹಣ ಬಿಡುಗಡೆ ಆಗಬೇಕಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಂಟು ಎಂಟು ತಿಂಗಳು ಹಣ ಬಿಡುಗಡೆ ಆಗಿರಲಿಲ್ಲ. ಬೆಳೆ ಹಾನಿ ವಿಚಾರದಲ್ಲಿ ಸ್ವತಃ ಸಿಎಂ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ನಾವೂ ಚುನಾವಣೆಯಲ್ಲೂ ಬ್ಯೂಸಿ ಇದ್ದೇವೆ. ಹಾಗೆ ರೈತರಿಗೆ ಪ್ರವಾಹ ಪರಿಹಾರ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದೇವೆ. ಪರಿಹಾರಕ್ಕೆ ಇನ್ನೂ ಸರ್ವೆ ಕಾರ್ಯ ನಡೆಯುತ್ತಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button