Latestಮೆಟ್ರೋ

ಕಬ್ಬಿನ ಎಫ್​​​ಆರ್​​ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ: ಸಚಿವ ಶಂಕರ್ ‌ಪಾಟೀಲ್ ಮುನೇನಕೊಪ್ಪ

ಬೆಂಗಳೂರು: ಕಬ್ಬಿನ ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ತಾವು ಸಚಿವರಾದ ಮೇಲೆ ಕೇಂದ್ರ ಸಕ್ಕರೆ ಸಚಿವರೊಂದಿಗೆ ಈಗಾಗಲೇ ಎರಡು ಬಾರಿ ಮಾತುಕತೆ ನಡೆಸಿರುವುದಾಗಿ ಸಕ್ಕರೆ ಖಾತೆ ಸಚಿವ ಶಂಕರ್ ‌ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುಧ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಆರ್​​ಪಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ರೈತರ ಬೇಡಿಕೆ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದ. ರೈತರ ಪ್ರತಿಭಟನೆಯನ್ನ ನಾವು ಹತ್ತಿಕ್ಕೋದಿಲ್ಲ. ರೈತ ಮುಖಂಡರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಲಾಗುವುದು ಎಂದರು.

ಏಕಕಾಲಕ್ಕೆ ಕಾರ್ಖಾನೆ ಆರಂಭಕ್ಕೆ ಕ್ರಮ:

ಇನ್ಮುಂದೆ ರಾಜ್ಯದಲ್ಲಿ ಏಕ ಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು. ಈ‌ ಬಗ್ಗೆ ಈಗಾಗಲೇ ಎಲ್ಲಾ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಮಾತಾಡಿದ್ದೇನೆ. ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡ್ತಾರೆ.ಇದ್ರೀಂದ ಅನೇಕ ಸಮಸ್ಯೆ ಆಗ್ತಿದೆ ಎಂದು ಸಚಿವರು ಹೇಳಿದರು.

ಈ ಸಂಬಂಧ ಎಲ್ಲಾ ಕಾರ್ಖಾನೆಗಳಿಗೆ ಏಕ ಕಾಲಕ್ಕೆ ಪ್ರಾರಂಭ ಮಾಡುವಂತೆ ಕಾರ್ಖಾನೆ ಮಾಲೀಕರಿಗೆ ಅವರು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಕಬ್ಬಿನ ಬಾಕಿ ಪಾವತಿ

ತಾವು ಸಕ್ಕರೆ ಸಚಿವರಾದ ಮೇಲೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸಭೆ ಮಾಡಿ, ಎಲ್ಲಾ ಕಾರ್ಖಾನೆ ಮಾಲೀಕರ ಜತೆ ಸಭೆ ಮಾಡಿದ್ದೆ. ಬಾಕಿ ಹಣ ನೀಡುವಂತೆ ಸೂಚನೆ ನೀಡಿದ್ದೆ ಪರಿಣಾಮವಾಗಿ ಒಟ್ಟು 47.17 ಕೋಟಿ ರೂ. ಕಬ್ಬಿನ ಬಾಕಿಯಲ್ಲಿ 3 ದಿನಗಳ ಒಳಗೆ 26.26 ಕೋಟಿ ಹಣ ಸರ್ಕಾರಕ್ಕೆ ಪಾವತಿಸಿದ್ದಾರೆ. ಇನ್ನು 15.91 ಕೋಟಿ ಮಾತ್ರ ಬಾಕಿ ಇದೆ.ಬಸವೇಶ್ವರ ಶುಗರ್, ಕೋರ್ ಬೀನ್ ಶುಗರ್ಸ್ ಬಾಕಿ ಹಣ ಕೊಟ್ಟಿಲ್ಲ ಎಂದು ಸಚಿವರು ತಿಳಿಸಿದರು.

ಬಾಕಿ ಪಾವತಿಸದ ಈ ಎರಡು ಕಾರ್ಖಾನೆಗಳಿಗೆ ರಿಕವರಿ ನೊಟೀಸ್ ನೀಡಲಾಗಿದೆ. ಆದಷ್ಟು ಬೇಗ ಅವ್ರು ಕೂಡಾ ಬಾಕಿ ಹಣ ನೀಡುವ ವಿಶ್ವಾಸವಿದೆ. ರೈತ ಕಬ್ಬು ಕೊಟ್ಟಾಗ ಕಾರ್ಖಾನೆಗಳು ಹಣ ಕೊಡಬೇಕು. ರೈತರ ಹಿತ ಕಾಪಾಡೋದು ಸರ್ಕಾರದ ಉದ್ದೇಶ ಎಂದರು.ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ

Spread the love

Related Articles

Leave a Reply

Your email address will not be published. Required fields are marked *

Back to top button