Latestಮನರಂಜನೆಮೆಟ್ರೋಸಿನಿಮಾ

ತಜ್ಞರ ಜೊತೆ ಚರ್ಚಿಸಿ ಥಿಯೇಟರ್​ಗಳಲ್ಲಿ ಶೇ.100ರಷ್ಟು ಸೀಟ್​ ಭರ್ತಿಗೆ ಅನುಮತಿ: ಸಚಿವ ಸುಧಾಕರ್

ಬೆಂಗಳೂರು : ತಜ್ಞರ ಜೊತೆ ಚರ್ಚಿಸಿ ಶೀಘ್ರದಲ್ಲೇ ಸಿನಿಮಾ ಥಿಯೇಟರ್​ಗಳಿಗೆ ಶೇ. 100 ರಷ್ಟು ಸೀಟುಗಳ​ ಭರ್ತಿಗೆ ಅನುಮತಿ ನೀಡಲಾಗುವುದು. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಒಂದು ಪರ್ಸೆಂಟ್​ಗಿಂತ ಕಡಿಮೆ ಇದೆ. ಎಲ್ಲದ್ದನ್ನೂ ಗಣನೆಗೆ ತೆಗೆದುಕೊಂಡು ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್​ ಹೇಳಿದ್ದಾರೆ.

ನಿರ್ಮಾಪಕರು, ಪ್ರದರ್ಶಕರು ಹಾಗೂ ಚಲನಚಿತ್ರ ಮಂಡಳಿ ನಷ್ಟದಲ್ಲಿರುವುದರಿಂದ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಪಾಸಿಟಿವ್​ ಆಗಿ ವಿಚಾರ ಮಾಡಿದ್ದೇವೆ. ಅವರಿಗೆ ಪೂರಕವಾದ ನಿರ್ಧಾಕ ತೆಗೆದುಕೊಳ್ಳುತ್ತೇವೆ. ರಾಜ್ಯದ ಜನರೂ ಸಹ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು.

ಕಳೆದ ಎರಡು ದಿನಗಳ ಹಿಂದೆ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಅವರು ಆರೋಗ್ಯ ಸಚಿವ ಕೆ. ಸುಧಾರಕರ್ ಅವರನ್ನು ಭೇಟಿಯಾಗಿ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಪತ್ರ ಸಲ್ಲಿಸಿತ್ತು.

ದೊಡ್ಡ ನಟರ ಸಿನಿಮಾಗಳಿಗೆ ಹೆಚ್ಚು ಹಣ ಹಾಕಿ ಚಿತ್ರ ಬಿಡುಗಡೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಕೊರೊನಾ ದಿನೇ ದಿನೇ ಕಡಿಮೆಯಾಗುತ್ತಿದೆ. ಹಾಗಾಗಿ ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button