Latestಮನರಂಜನೆಸಿನಿಮಾಸೆಲೆಬ್ರಿಟಿ

ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಇಹಲೋಕ ತ್ಯಜಿಸಿದ್ದಾರೆ. 75 ವರ್ಷ ವಯಸ್ಸಿನ ಕಟ್ಟೆ ರಾಮಚಂದ್ರ ಅರಿವು, ವೈಶಾಖದ ದಿನಗಳು ಸೇರಿದಂತೆ ಸಾಕಷ್ಟು ಸಿನಿಮಾಗಳ ನಿರ್ದೇಶನ ಮಾಡಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಟ್ಟೆ ರಾಮಚಂದ್ರ ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ನಿಧನ ರಾಗಿದ್ದಾರೆ. ಚಾಮರಾಜ ಪೇಟೆಯ ರುದ್ರ ಭೂಮಿಯಲ್ಲಿ ಇಂದು ಮದ್ಯಾಹ್ನ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ಮುಂದಾಗಿದ್ದಾರೆ. ನಟ ಡಾ.ವಿಷ್ಣುವರ್ಧನ್​ಗೆ ಆಪ್ತರಾಗಿದ್ದ ಕಟ್ಟೆ ರಾಮಚಂದ್ರ ನಟನೆಯಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button