Dhanush Aishwarya Divorce: 18 ವರ್ಷಗಳ ದಾಂಪತ್ಯ ಅಂತ್ಯಗೊಳಿಸಿದ ಧನುಷ್, ಐಶ್ವರ್ಯಾ

ತಮಿಳಿನ ಖ್ಯಾತ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. 18 ವರ್ಷಗಳ ದಾಂಪತ್ಯ ಜೀವನಕ್ಕೆ ಈ ಜೋಡಿಗಳು ಅಂತ್ಯ ಹಾಡಿದ್ದು ತಾವಿಬ್ಬರು ಬೇರೆ ಬೇರೆಯಾಗುತ್ತಿರುವ ಸುದ್ದಿಯನ್ನ ಧನುಷ್ ಹಾಗೂ ಐಶ್ವರ್ಯಾ ಸ್ಪಷ್ಟ ಪಡಿಸಿದ್ದಾರೆ. ಜೋಡಿಯ ಪೋಸ್ಟ್ ನೋಡಿದ ಅಭಿಮಾನಿಗಳು ಅಘಾತ ವ್ಯಕ್ತಪಡಿಸುತ್ತಿದ್ದಾರೆ.
2004ರಲ್ಲಿ ಧನುಷ್ ಹಾಗೂ ಐಶ್ವರ್ಯಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ 18 ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡುತ್ತಿದ್ದಾರೆ. ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯಾ ಆರ್ ಧನುಷ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲೇ ತಾವು ಬೇರೆ ಬೇರೆಯಾಗುತ್ತಿರೋ ವಿಷಯವನ್ನ ತಿಳಿಸಿದಿದ್ದಾರೆ. ಅಲ್ಲದೆ ತಮ್ಮ ಬದುಕಿನ ಈ ಹಂತದಲ್ಲಿ ಜನ ತಮ್ಮಿಬ್ಬರನ್ನೂ ಅರ್ಥ ಮಾಡಿಕೊಳ್ಳುವಂತೆ, ಆ ಮೂಲಕ ತಮ್ಮ ಖಾಸಗಿ ಬದುಕಿಗೆ ಅಗತ್ಯವಿರುವ ಪ್ರೈವೆಸಿ ನೀಡುವಂತೆ ಕೋರಿಕೊಂಡಿದ್ದಾರೆ.
ಇದೇ ಮಾತನ್ನ ನಟ ಧನುಷ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಧನುಷ್ ಹಾಗೂ ಐಶ್ವರ್ಯಾ ಆದರ್ಶ ದಂಪತಿಗಳಾಗಿದ್ದು ಈ ಜೋಡಿಗಳು ಸಾಕಷ್ಟು ಮಂದಿಗೆ ಆದರ್ಶವಾಗಿದ್ದರು. ಆದರೆ ಇದೀಗ ಈ ಜೋಡಿಗಳು ಬೇರೆ ಬೇರೆಯಾಗ್ತಿರೋದು ಅವ್ರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ.
ನಾವಿಬ್ಬರೂ ಬೇರೆ ಬೇರೆಯಾಗಿ ನಮ್ಮನ್ನು ನಾವು ಸ್ವತಂತ್ರ ವ್ಯಕ್ತಿಗಳಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ದಯವಿಟ್ಟು ನಮಗೆ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಖಾಸಗಿತನವನ್ನ ನೀಡಿ, ನಮ್ಮನ್ನು ಅರ್ಥಮಾಡಿಕೊಳ್ಳಿ ಎಂದು ಇಬ್ಬರು ಪತ್ರದಲ್ಲಿ ಕೇಳಿಕೊಂಡಿದ್ದಾರೆ.



