Latestಕೊಡಗುಜಿಲ್ಲಾ ಸುದ್ದಿ

K G Bopaiah: ಅಪರಿಚಿತರಿಂದ ಶಾಸಕರಿಗೆ ಹಣದ ಬೇಡಿಕೆ : ದೂರು ದಾಖಲು

ಕೊಡಗು : ನಿನ್ನೆ ರಾತ್ರಿ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಕರೆಮಾಡಿ “ತಾವು ಎ.ಸಿ.ಬಿ ಅವರು, ತಮ್ಮ ಮೇಲೆ. ಎ‌.ಸಿ.ಬಿ ದಾಳಿ ಮಾಡಲು ಸಜ್ಜಾಗುತ್ತಿದ್ದು ಈ ಎ.ಸಿ.ಬಿ ದಾಳಿಯನ್ನು‌ ತಡೆಹಿಡಿಯಲು ಒಂದು ಕೋಟಿ ರೂ ನೀಡಬೇಕೆಂದು ವಿರಾಜಪೇಟೆ ಶಾಸಕ ಬೋಪಯ್ಯ ಅವರಿಗೆ” ಹಣದ ಬೇಡಿಕೆ ಒಡ್ಡಿರುವ ಘಟನೆ ಸಂಭವಿಸಿದೆ.

ಕೆ.ಜಿ. ಬೋಪಯ್ಯನವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ಧಾವೆ ಹೂಡಿರುತ್ತಾರೆ.‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭವಾಗಿದೆ.

ಅಪರಿಚಿತ ಮೊಬೈಲ್ ಸಂಖ್ಯೆಯಲ್ಲಿ ಝಹೀಬ್ ಖಾನ್ ಎನ್ನುವವರದ್ದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು. ತನಿಖೆ ನಂತರ ಸತ್ಯಾಸತ್ಯತೆ ಬಯಲಾಗಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button