Latestಹುಬ್ಬಳ್ಳಿ - ಧಾರವಾಡ

ಧಾರವಾಡದ ನಿಗದಿ ಗ್ರಾಮದಲ್ಲಿ ಮಳೆ ಅವಾಂತರ; ವೃದ್ಧೆಯೊಬ್ಬರು ಕಷ್ಟಪಟ್ಟು ಬೆಳೆದ ಬತ್ತ ನೀರುಪಾಲು

ಧಾರವಾಡ: ಮೊದಲೇ ಗಂಡು ಮಕ್ಕಳು ಇಲ್ಲದ ಕಷ್ಟದಲ್ಲಿರುವ ಅಜ್ಜಿಯೊಬ್ಬರು ಹಾಗೋ ಹಿಗೋ‌‌ ಮಾಡಿ, ಸ್ಥಳೀಯರ ಸಹಾಯ ಪಡೆದುಕೊಂಡು ಇದ್ದ ಜಮೀನಿಗೆ ಬತ್ತ ಬಿತ್ತನೆ ಮಾಡಿದ್ದರು. ಇನ್ನೇನು ಬೆಳೆಯನ್ನು ಕಟಾವು ಮಾಡಿದ್ದು, ಬತ್ತ ತುಳಿಸಿ ಫಸಲನ್ನು ತೆಗೆದುಕೊಳ್ಳಬೇಕು‌ ಎಂಬ‌ ಯೋಚೆಯಲ್ಲಿದ್ದರು. ಆದರೆ ಕಳೆದ ಎರಡು ದಿನ ಸುರಿಯುತ್ತಿರುವ ಧಾರಾಕಾರ ಮಳೆ‌ ಈಗ ಅಜ್ಜಿಯನ್ನು ಕಣ್ಣೀರು ಹಾಕುಂವತೆ ಮಾಡಿದೆ.‌

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಅಡಿವೇಮ್ಮ ಬಾಡದ ಅಜ್ಜಿಯ 3 ಎಕರೆ ಜಮೀನು ಹೊಂದಿದ್ದು, ಗ್ರಾಮದ ರೈತರ ಸಹಾಯ ಪಡೆದುಕೊಂಡು ಮುಂಗಾರಿ ಬತ್ತ ಬಿತ್ತನೆ ಮಾಡಿದರು. ಉತ್ತಮ ಮುಂಗಾರು ಮಳೆಯಿಂದ ಬತ್ತವೇನೊ ಚೆನ್ನಾಗಿ ಬಂದಿತ್ತು. ಬತ್ತದ ಬೆಳವಣಿಗೆ ನೋಡಿದ‌ ಅಜ್ಜಿ‌ ಅಡೀವೆಮ್ಮ ಈ ವರ್ಷ ಕೊಂಚ ನಮ್ಮ ಕಷ್ಟುಗಳು ಕಡಿಮೆಯಾಗಬಹುದು ಎಂಬ ಭರವಸೆ ಇಟ್ಟುಕೊಂಡಿದ್ದರು. ಕಳೆದೆರಡು ದಿನಗಳಿಂದ ಸಂಜೆವೇಳೆಗೆ ಸುರಿಯುತ್ತಿರುವ ಸತತ ಮಳೆಯಿಂದಾಗಿ ಈಗ ಕಟಾವ್ ಮಾಡಿದ ಬತ್ತದ ಫಸಲಿಗೆ ಈಗ ಮಳೆರಾಯ‌ ದಿಗ್ಬಂಧನ ಹಾಕಿ ಒಂಟಿ ಅಜ್ಜಿಯನ್ನು ಕಣ್ಣೀರು ಹಾಕಿಸುವಂತೆ ಮಾಡಿದೆ.‌

ಮೊದಲೇ ಯಾರು ಕೂಡಾ ಗಂಡು ಮಕ್ಕಳು ಇಲ್ಲದ ಸಂಕಷ್ಟದಲ್ಲಿರುವ ಅಜ್ಜಿ ಒಂಟಿಯಾಗಿಯೇ ಕೃಷಿ ಕಾಯಕ ಮಾಡಿಕೊಂಡು ಬಂದಿದ್ದಾರೆ. ಈ ಅಜ್ಜಿಗೆ ಇಬ್ಬರು ಹೆಣ್ಮಕ್ಕಳಿದ್ದು ಅವರನ್ನು ಈಗಾಗಲೇ ಮದುವೆ ಮಾಡಿಕೊಟ್ಟಿದ್ದಾರೆ. ಈಗ ಅಡಿವೇಮ್ಮ ಅಜ್ಜಿಯು ಒಬ್ಬಂಟಿಯಾಗಿದ್ದು ಮೂರು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಸ್ಥಳೀಯರ ಸಹಕಾರದೊಂದಿಗೆ ಬತ್ತ ಬಿತ್ತನೆ ಮಾಡಿದ್ದರು. ಇನ್ನೇನು ನಮ್ಮ ಬತ್ತದ ಬೆಳೆ ಬಂತು ನಮ್ಮ ಕಷ್ಟಗಳು ಕೊಂಚ ಕಡಿಮೆಯಾದವು ಅಂದುಕೊಂಡಿದ್ದರು. ಆದರೆ ಆ ಆಸೆಗೆ ಈಗ ಮಳೆರಾಯ ತಣ್ಣೀರು ಏರಚಿದ್ದಾನೆ. ಕಳೆದೆರಡು ದಿನದ ಹಿಂದೆಯಷ್ಟೇ ಕಟಾವ್ ಮಾಡಿ ಜಮೀನಿನಲ್ಲಿ ಇಟ್ಟಿದ್ದ ಬತ್ತ ಬೆಳೆ ಈಗ ಸಂಪೂರ್ಣ ಜಲಾವೃತಗೊಂಡಿದ್ದು, ಸರ್ಕಾರದ ಸಹಾಯ ಹಸ್ತಕ್ಕೆ ಅಜ್ಜಿ ಎದುರು ನೋಡುತ್ತಿದ್ದಾರೆ.

ಮಳೆರಾಯನ ಅವಾಂತರದಿಂದ ಅಡಿವೇಮ್ಮ ಅಜ್ಜಿಯು ಈಗ ಕಣ್ಣೀರು ಹಾಕುತ್ತಿದ್ದು, ಇದರ ಜೊತೆಗೆ ಮೋಡ್ ಕವಿದ ವಾತಾವರಣವು ಇರುವುದರಿಂದ ನೀರಿನಲ್ಲಿ ತಂಪಾಗಿರುವ ಬತ್ತದ ಹೊಡೆ ಯಾವಾಗ ಆರಿಕೆಯಾಗುತ್ತೋ ಎಂಬ ಚಿಂತೆಯಲ್ಲಿದ್ದಾರೆ. ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಏನನ್ನಾದರೂ ಪರಿಹಾರ ನೀಡಬೇಕು ಎಂದು ಅಜ್ಜಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button