ವಿವಾಹಿತೆಗೆ ಅಪರಿಚಿತ ಯುವಕನಿಂದ ಲೈಂಗಿಕ ಕಿರುಕುಳ ಪತಿಯ ಆವಾಜ್ ಗೆ ಹೆದರಿ ಯುವಕ ಆತ್ಮಹತ್ಯೆ

ಮೈಸೂರು : ವಿವಾಹಿತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಪರಿಚಿತ ಯುವಕನಿಗೆ ಮಹಿಳೆಯ ಪತಿ ಅವಾಜ್ ಹಾಕಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಯರಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಯರಗನಹಳ್ಳಿ ನಿವಾಸಿ ಪ್ರಜ್ವಲ್ (19) ಮೃತ ಯುವಕ ಎಂದು ಗುರತಿಸಲಾಗಿದೆ. ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್, ಅಪರಿಚಿತ ಮಹಿಳೆಗೆ ಫೋನ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಲೈಂಗಿಕ ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ ಪತಿಗೆ ಹೇಳಿದ್ದಾರೆ. ಮಹಿಳೆಯ ಪತಿ ಸೇರಿದಂತೆ 5 ಮಂದಿ ಯರಗನಹಳ್ಳಿಯಲ್ಲಿರುವ ಯುವಕನ ಮನೆಗೆ ತೆರಳಿ ಗುರುವಾರ ಗಲಾಟೆ ಮಾಡಿದ್ದಾರೆ. ನಂತರ ಶುಕ್ರವಾರ ಹೋಟೆಲ್ನಿಂದ ಪ್ರಜ್ವಲ್ನನ್ನ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ.
ಹೋಟೆಲ್ ಯೂನಿಫಾರಮ್ನಲ್ಲಿದ್ದ ಕಾರಣ ಬಟ್ಟೆ ಬದಲಿಸಿ ಬರುವುದಾಗಿ ಪ್ರಜ್ವಲ್ ತಿಳಿಸಿ, ಹೋಟೆಲ್ ಕಟ್ಟಡದ ತಾರಸಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ 5 ಮಂದಿ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



