Latestಕಲಬುರ್ಗಿಜಿಲ್ಲಾ ಸುದ್ದಿ
ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಯವಕನ ಹತ್ಯೆ

ಕಲಬುರ್ಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಯುವಕನ ಹತ್ಯೆಗೈದ ಘಟನೆ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
ಮಹಮ್ಮದ್ ರಶೀದ್ (26) ಕೊಲೆಯಾದ ಯುವಕ. ಪುಡಿರೌಡಿ ಲಂಗ್ಡಾ ಸಲೀಂ ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಲಂಗ್ಡಾ ಸಲೀಂನನ್ನು ಬಂಧಿಸಿದ್ದಾರೆ. ರಶೀದ್ ಹಾಗೂ ಲಂಗ್ಡಾ ಸಲೀಂ ಮದ್ಯೆ ಜಗಳ ನಡೆದು ಜಗಳ ವಿಕೋಪಕ್ಕೆ ತಿರುಗಿದಾಗ ರಶೀದ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಲಂಗ್ಡಾ ಸಲೀಂ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗುತ್ತಿದೆ. ಸಲೀಂ ಬಳಿ ಗಾಂಜಾ ಖರೀದಿಗೆ ಹೋದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನೊಂದಡೆ ಹುಡಗಿಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸದ್ಯ ಸ್ಥಳಕ್ಕೆ ಭೇಟಿನೀಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೆ ನಿಜಾಂಶ ಹೊರಬರಬೇಕಿದೆ.
ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



