Latestಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರ

ಮೇಘಾಲಯದಿಂದ ಬಿಎಸ್​ಎಫ್​​​ ಕ್ಯಾಂಪ್ ಗೆ ಬಂದ 34 ಯೋಧರಲ್ಲಿ ಕೊರೊನಾ ಸೊಂಕು ಪತ್ತೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಕಾರಹಳ್ಳಿಯ ಬಿಎಸ್ಎಪ್ ಕ್ಯಾಂಪ್ ನ 70 ಜನರಿಗೆ ನಿನ್ನೆ ಕೊರೊನಾ ಸೊಂಕು ಪತ್ತೆಯಾಗಿದ್ದು ಕಳೆದ ಎರಡು ದಿನಗಳಿಂದ ಯೋಧರಿಗೆ ನಿರಂತರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಮೇಘಾಲಯದಿಂದ ಬಂದ 34 ಯೋಧರಲ್ಲಿ ಕೊರೊನಾ ಸೊಂಕು ಪತ್ತೆಯಾಗುವುದರ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

ಇಂದು ಕೂಡ ಮತ್ತೆ 36 ಜನ ಯೋಧರಿಗೆ ‌ಕೊರೊನಾ ಸೊಂಕು ದೃಡವಾಗಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ನಿನ್ನೆ ಕೊರೊನಾ ಟೆಸ್ಟ್ ಮಾಡಲಾಗಿದ್ದ 365 ಜನರಲ್ಲಿ 36 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಸೋಂಕು ತಗುಲಿದ ಯೋಧರನ್ನು ನಿಗದಿತ ‌ಆಸ್ವತ್ರೆಯಲ್ಲಿ ಐಸುಲೇಷನ್ ಮಾಡಲಾಗಿದೆ.

ಕ್ಯಾಂಪ್ ನಲ್ಲಿರುವ ಇನ್ನೂ 1400 ಜನ ಯೋಧರಿಗೆ ಕೊರೊನಾ ಟೆಸ್ಟಿಂಗ್ ನಡೆಯಲಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಈ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ, 1400 ಯೋಧರ ಟೆಸ್ಟಿಂಗ್ ಬಳಿಕ‌ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಬಗ್ಗೆ ಯೋಧರು ಮತ್ತು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಇಂದು ಸಹ ಕ್ಯಾಂಪ್‌ ನಲ್ಲಿ ಟೆಸ್ಟಿಂಗ್ ನಡೆಯಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button