
ನವದೆಹಲಿ: ದೆಹಲಿಯಲ್ಲಿರುವ ಸಿಎಂ ಯಡಿಯೂರಪ್ಪ ರಾಜ್ಯದಿಂದ ನೂತನವಾಗಿ ಕೇಂದ್ರ ಸಚಿವ ಸಂಪುಟ ಸೇರಿದ ಸಚಿವರನ್ನು ಭೇಟಿಯಾದರು.
ನೂತನ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ಮತ್ತು ಎ ನಾರಾಯಣಸ್ವಾಮಿ ಅವರನ್ನು ಕಂಡು ಶುಭ ಕೋರಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಈ ಭೇಟಿ ನಡೆಯಿತು. ನೂತನ ಸಚಿವರೊಡನೆ ಸಿಎಂ ಚರ್ಚೆ ನಡೆಸಿದರು.





