
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 15 ರಿಂದ 18 ವರ್ಷದ ಮಕ್ಕಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ
ಮೂಡಲಪಾಳ್ಯದ ಭೈರವೇಶ್ವರನಗರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲ ಹಂತದಲ್ಲಿ 10 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನ ಹೊಂದಿದ್ದು, ರಾಜ್ಯಾದ್ಯಂತ ಶಾಲಾ, ಕಾಲೇಜುಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ.
ಇಂದು ರಾಜ್ಯದ 220 ಶಾಲೆಗಳಲ್ಲಿ 6 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. CoWINನಲ್ಲಿ ನೋಂದಣಿ ಮಾಡಿಕೊಂಡು ಸ್ಕೂಲ್ ಐಡಿ ಕಾರ್ಡ್ ತೋರಿಸಿದರೆ ಲಸಿಕೆ ನೀಡಲಾಗುತ್ತದೆ. ಮಕ್ಕಳು ಹೆಚ್ಚಿರುವ ಕಡೆಯೇ ಕ್ಯಾಂಪ್ ಮಾಡಿ ಲಸಿಕೆ ನೀಡಲು ಪ್ಲಾನ್ ಮಾಡಲಾಗಿದೆ.
ಬೆಂಗಳೂರಲ್ಲಿ 7 ಲಕ್ಷ ಮಕ್ಕಳನ್ನು ಬಿಬಿಎಂಪಿ ಗುರುತು ಮಾಡಿದೆ. ಸರ್ಕಾರ ರಾಜ್ಯಾದ್ಯಂತ 4,160 ಲಸಿಕಾ ಶಿಬಿರ ಸ್ಥಾಪಿಸಿದ್ದು, ಮಕ್ಕಳಿಗೆ 0.5 ಎಂಎಲ್ ಡೋಸ್ ಕೊವ್ಯಾಕ್ಸಿನ್ ವಿತರಣೆ ಮಾಡಲಾಗುತ್ತದೆ.



