Latestವಿದೇಶ

ಚೀನಾದಲ್ಲಿ ಒಂದು ಮಗು ನೀತಿ ಎಫೆಕ್ಟ್: ಸತತ 5ನೇ ವರ್ಷವೂ ಕುಸಿದ ಜನನ ಪ್ರಮಾಣ

ಚೀನಾದಲ್ಲಿ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ದೇಶದ ಕಟ್ಟುನಿಟ್ಟಾದ ಕುಟುಂಬ ಯೋಜನೆಯಾಗಿದ್ದ ಒಂದೇ ಮಗು ನೀತಿಯನ್ನ ಸಡಿಲೀಕರಿಸಿದ್ದರು ಮಕ್ಕಳ ಜನನ ಪ್ರಮಾಣ ಹೆಚ್ಚಳವಾಗುವಲ್ಲಿ ಚೀನಾ ವಿಫಲವಾಗಿದೆ ಎಂದು ವರದಿಯಾಗಿದೆ.

2021ರಲ್ಲಿ ಕೇವಲ 4.80 ಲಕ್ಷ ಜನಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು 141.26 ಕೋಟಿಗೆ ತಲುಪಿದೆ. ಈ ಮೂಲಕ ಐದನೇ ವರ್ಷವೂ ಚೀನಾದಲ್ಲಿ ಜನನ ಪ್ರಮಾಣ ಕುಂಠಿತವಾಗಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ.

ದಶಕಗಳ ಕಾಲ ಜಾರಿಯಲ್ಲಿದ್ದ ಒಂದು ಮಗು ನೀತಿಯನ್ನ ಚೀನಾ ಸರ್ಕಾರ 2016ರಲ್ಲಿ ನಿಯಮಗಳನ್ನ ಬದಲಾಯಿಸಿತ್ತು. ವೇಗವಾಗಿ ವಯಸ್ಸಾದ ಜನಸಂಖ್ಯೆ ಹಾಗೂ ಕುಗ್ಗುತ್ತಿರುವ ಉದ್ಯೋಗಿಗಳ ಬಗ್ಗೆ ಆತಂಕಗಳು ಹೆಚ್ಚಾಗುತ್ತಿದ್ದಂತೆ ಒಂದು ಕುಟುಂಬಕ್ಕೆ ಇಬ್ಬರು ಮಕ್ಕಳನ್ನು ಹೊಂದಲು ಈ ನಿಯಮದಲ್ಲಿ ಅವಕಾಶ ನೀಡಲಾಗಿತ್ತು.

ಚೀನಾ 1970ರ ದಶಕದ ಉತ್ತರಾರ್ಧದಲ್ಲಿ ತ್ವರಿತ ಜನಸಂಖ್ಯಾ ಬೆಳವಣಿಗೆಯನ್ನು ನಿಧಾನಗೊಳಿಸುವ ಪ್ರಯತ್ನದಲ್ಲಿ ಒಂದು ಮಗುವಿನ ನೀತಿಯನ್ನ ಜಾರಿಗೆ ತಂದಿತ್ತು. ಆದರೆ 2016ರಲ್ಲಿ ಹಳೆ ನೀತಿಯನ್ನ ಹಿಂತೆಗೆದುಕೊಂಡ ಹೊಸ ನೀತಿಯನ್ನು ಬೀಜಿಂಗ್ ಹೊರ ತಂದಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button