Latestಮನರಂಜನೆಸಿನಿಮಾಸೆಲೆಬ್ರಿಟಿ
ಎನ್ ಸಿಬಿ ವಶವಾದ ಶಾರುಖ್ ಖಾನ್ ಪುತ್ರ ಆರ್ಯನ್ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಶನಿವಾರ ಸಂಜೆ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಪಾರ್ಟಿ ನಡೆಸಿದ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಸೇರಿದಂತೆ ಇತರ ಏಳು ಜನರನ್ನು ಎನ್ ಸಿಬಿ ದಾಳಿ ನಡೆಸಿ ವಶಕ್ಕೆ ಪಡೆದಿದೆ ಎಂಬುದಾಗಿ ತಿಳಿದು ಬಂದಿದೆ.
ಕ್ರೂಸ್ ಹಡಗಿನಲ್ಲಿ ನಡೆದ ದಾಳಿಯಲ್ಲಿ ಆರ್ಯನ್ ಭಾಗಿಯಾಗಿರುವುದು ಬಹಳಷ್ಟು ಬಾಲಿವುಡ್ ತಾರೆಯರಿಗೆ ಆಘಾತವನ್ನು ತಂದಿದೆ. ಈ ಬಗ್ಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಬೇಡಿ. ಸ್ಟಾರ್ ಮಕ್ಕಳ ಬಗ್ಗೆ ಕೆಟ್ಟದ್ದನ್ನು ಊಹಿಸಬೇಡಿ ಎಂದು ವಿನಂತಿಸಿದ್ದಾರೆ.
ಎಲ್ಲೆಲ್ಲಿ ದಾಳಿ ನಡೆದರೂ ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ. ಹಾಗಾಗಿ ಈ ಮಗು ಡಗ್ಸ್ ಸೇವಿಸಿದೆ ಎಂದು ಊಹಿಸಬೇಡಿ. ಆದರೆ ಪ್ರಕ್ರಿಯೆಗಳು ನಡೆಯುತ್ತಿವೆ. ಆ ಮಗುವಿಗೆ ಉಸಿರಾಡಲು ಅವಕಾಶ ನೀಡಿ. ಸತ್ಯ ಹೊರಬರಲಿ ಎಂದು ಅವರು ತಿಳಿದ್ದಾರೆ.



