
ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಬಿಜೆಪಿ ದೆಹಲಿ ವಕ್ತಾರೆ ನಿಘಾತ್ ಅಬ್ಬಾಸ್ ಖಂಡಿಸಿದ್ದಾರೆ.
ಮಹಾತ್ಮ ಗಾಂಧೀಜಿಗೆ ರಾಷ್ಟ್ರಪಿತ ಸ್ಥಾನಮಾನ ನೀಡಲಾಗಿದೆ. ಅವರ ಆದರ್ಶಗಳು ದೇಶದಲ್ಲಿ ಭಾರತೀಯತೆಯನ್ನು ಜೀವಂತವಾಗಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಗಾಂಧೀಜಿಯ ಬೋಧನೆಗಳಿಂದ ಪ್ರೇರಿತರಾಗಿದ್ದಾರೆ ಎಂದು ನಿಘಾತ್ ಅಬ್ಬಾಸ್ ತಮ್ಮ ಟ್ವಿಟರ್ ಮೂಲಕ ಹೇಳಿಕೆ ನೀಡಿದ್ದಾರೆ.
ಗಾಂಧೀಜಿಯವರ ಬಗ್ಗೆ ಅವಹೇಳನ ಮಾಡುವುದರ ಉದ್ದೇಶವಾದರೂ ಏನು? ಇಂತಹ ಹೇಳಿಕೆಗಳಿಂದ ದೇಶದ ಜನರನ್ನು ನೋಯಿಸುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸಲು ಪ್ರೇರೇಪಿಸಿದಂತಾಗುತ್ತದೆ ಎಂದಿದ್ದಾರೆ.



