ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಬೇಕಾದರೆ ಮದರಸಾಗೆ ಹೋಗಿ ಹಾಕಲಿ: ಸಂಸದ ಪ್ರತಾಪ್ ಸಿಂಹ ಕಿಡಿ

ಕೊಡಗು : ಕರ್ನಾಟಕ ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಹಿಜಾಬ್ ಪ್ರಕರಣಕ್ಕೆ ಸಂಬಂದಿಸಿದಂತೆ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ ಅವರು ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಬೇಕಾದರೆ ಮದರಸಾಗೆ ಹೋಗಿ ಹಾಕಲಿ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲೆಗೆ ಸಮವಸ್ತ್ರವನ್ನು ಧರಿಸಿ ಬರಬೇಕು. ಇದು ಬ್ರಿಟಿಷರ ಇಂಡಿಯಾ ಅಲ್ಲ, ಹಿಂದು ಧರ್ಮದ ದೇಶ, ಇಲ್ಲಿಯ ಸಂಸ್ಕೃತಿಯನ್ನು ಎಲ್ಲರು ಕಾಪಾಡಬೇಕು ಎಂದು ತಿಳಿಸಿದರು.
ನಮ್ಮನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಇದು ಹಿಂದೂ ದೇಶ, ಮುಸ್ಲಿಮರು, ಕ್ರೈಸ್ತರು ನಮ್ಮನ್ನು ಪ್ರಶ್ನೆ ಮಾಡಬೇಡಿ. ಗಣೇಶ ಪೂಜೆ, ಶಾರದಾ ಪೂಜೆ ಮಾಡುವುದು ನಮ್ಮ ಸಂಸ್ಕೃತಿ, ಬಳೆ ಹಾಕುವುದು ನಮ್ಮ ಸಂಪ್ರದಾಯ, ಈ ನೆಲದ ಹಕ್ಕನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ ಎಂದರು.
ನಾವು ಮೆಕ್ಕಾದಲ್ಲಿ ಪೂಜೆಗೆ ಅವಕಾಶ ಕೊಡಿ ಎಂದು ಕೇಳಿಲ್ಲ, ಭಾರತ ನಮ್ಮ ನೆಲ ಇಲ್ಲಿ ನಮ್ಮದೇ ಸಂಪ್ರದಾಯ, ಹಕ್ಕು ಮಾತ್ರ ಇರಬೇಕು ಎಂದು ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ಕಿಡಿಕಾರಿದರು.
