Breaking NewsLatestರಾಷ್ಟ್ರೀಯಸುದ್ದಿ
ಬಿರ್ಭೂಮ್ ಹತ್ಯೆ: ಸಜೀವ ದಹನಕ್ಕೂ ಮುನ್ನ ಮನಬಂದಂತೆ ಥಳಿತ, ಮರಣೋತ್ತರ ಪರೀಕ್ಷಾ ವರದಿ

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಸಜೀವ ದಹನವಾದ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರ ಕೊಲೆಗೂ ಮುನ್ನ ಮನಬಂದಂತೆ ಥಳಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಮಂಗಳವಾರ ಮುಂಜಾನೆ ಅಪರಿಚಿತರಿಂದ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ದೊರೆತ ಸುಟ್ಟ ಸುಟ್ಟ ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ವಿಧಿ ವಿಜ್ಞಾನ ಪ್ರಯೋಗಾಲಯ ತಂತ್ರಜ್ಞರ ಪ್ರಕಾರ, ಕೊಲೆಗೂ ಮೊದಲು ಸಂತ್ರಸ್ಥರನ್ನ ಮನ ಬಂದಂತೆ ಥಳಿಸಿ, ತದನಂತರ ಜೀವಂತವಾಗಿ ಸುಟ್ಟು ಹಾಕಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಘಟನೆಗೆ ಸಂಬಂಧ ಇದುವರೆಗೂ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಿಂದ ಪ್ರಚೋದಿಸಲ್ಪಟ್ಟಿದೆ ಎಂದು ಶಂಕಿಸಲಾಗಿದ್ದು ಈಗಾಗ್ಲೆ ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂ ಸೇವಕರನ್ನು ನಿರ್ಲಕ್ಷ್ಯದ ಆಧಾರದ ಮೇಲೆ ತೆಗೆದುಹಾಕಲಾಗಿದೆ.
