Breaking NewsLatestಬಾಲಿವುಡ್ಮನರಂಜನೆಸಿನಿಮಾ
ಬೆಂಗಾಳಿ ಚಿತ್ರರಂಗದ ಹಿರಿಯ ನಟ ನಿಧನ; ಗಣ್ಯರಿಂದ ಸಂತಾಪ ಸೂಚನೆ

ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಆಗಾಗ ಆಘಾತಗಳು ಎದುರಾಗುತ್ತಿವೆ. ಈಗಾಗಲೇ ಕೋವಿಡ್ ಸಮಯದಲ್ಲಿ ಸಾಕಷ್ಟು ಕಲಾವಿದರು ನಿಧನ ಹೊಂದಿದ್ದರು. ಇದೀಗ ಮತ್ತೊಬ್ಬ ಹಿರಿಯ ನಟ ನಿಧನ ಹೊಂದಿದ್ದಾರೆ.ಯಾರು ಗೊತ್ತಾ? ಬೆಂಗಾಳಿ ಚಿತ್ರರಂಗದ ಹಿರಿಯ ನಟ ಅಭಿಷೇಕ್ ಚಟರ್ಜಿ ಸಾವನ್ನಪ್ಪಿದ್ದಾರೆ.
ಅವರು ಕಳೆದ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಎಲ್ಲವೂ ಖಚಿತವಾಗಿ ತಿಳಿಯಲಿದೆ.
ಇನ್ನು ಅಭಿಷೇಕ್ ಅಗಲಿಕೆಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಭಿಷೇಕ್ 1986ರಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬೆಂಗಾಳಿಯ ಪಥಬೋಲಾ ಎಂಬ ಮೊದಲ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
