Latestಮನರಂಜನೆರಾಜ್ಯಸಿನಿಮಾಸುದ್ದಿಸೆಲೆಬ್ರಿಟಿ

ಪುನೀತ್ ರಾಜ್​ಕುಮಾರ್ ರಸ್ತೆ ನಿರ್ಮಾಣಕ್ಕೆ BBMP ಇಂದ ಗ್ರೀನ್ ಸಿಗ್ನಲ್

ಪುನೀತ್ ರಾಜ್​ಕುಮಾರ್ ರಸ್ತೆ ನಾಮಕರಣಕ್ಕೆ ಬಿಬಿಎಂಪಿ ಇಂದ ಅಧಿಕೃತ ಅನುಮೋದನೆ ಸಿಕ್ಕಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ಶ್ರೀ ಪುನೀತ್ ರಾಜ್​ಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಿದ್ದಾರೆ.

ಮೈಸೂರು ರಸ್ತೆಯ ನಾಯಂಡನ ಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್​ಕುಮಾರ್ ಎಂದು ನಾಮಕರಣ ಮಾಡಲಾಗುತ್ತಿದೆ. ಪುನೀತ್ ರಾಜ್​ಕುಮಾರ್ ರಸ್ತೆ ಹೊಸಕೆರೆ ಹಳ್ಳಿ, ದೇವೆಗೌಡ ಪೆಟ್ರೋಲ್ ಬಂಕ್, ಕದಿರೇನ ಹಳ್ಳಿ ಪಾರ್ಕ್, ಸಾರಕ್ಕಿ ಸಿಗ್ನಲ್ ಹಾಗೂ ಜೆ ಪಿ ನಗರವನ್ನ ಸಂಪರ್ಕಿಸಲಿದೆ.

ರಸ್ತೆಗೆ ಅಂಬರೀಶ್ ಹೆಸರಿಡುವಂತೆ ಒತ್ತಾಯಿಸಿದ್ದ ಅಂಬಿ ಅಭಿಮಾನಿಗಳು
ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ನಟ ಪುನೀತ್ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಜೊತೆಗೆ ಈ ಬಗ್ಗೆ ಜಾಹೀರಾತು ನೀಡಿದ್ದ ಬಿಬಿಎಂಪಿ ಈ ನಿರ್ಧಾರಕ್ಕೆ ಆಕ್ಷೇಪಗಳಿದ್ದರೆ ಜನವರಿ 29ರ ಒಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಹೇಳಿಕೆ ನೀಡಿತ್ತು. ಇದಕ್ಕೆ ನಟ ಅಂಬರೀಶ್ ಅಭಿಮಾನಿಗಳು ಆಕ್ಷೇಪಣೆ ಸಲ್ಲಿಸಿದ್ದರು.

ನಾಯಂಡನಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ನಟ ಪುನೀತ್ ಹೆಸರು ಇಡಬಾರದು. ಇದಕ್ಕೆ ನಟ ಅಂಬರೀಶ್ ಹೆಸರು ಇಡಬೇಕು. 1993ರ ಸಂದರ್ಭದಲ್ಲಿ ಈ ರಸ್ತೆಗೆ ಅಂಬಿ ಹೆಸರಿಡಲು ಬಾಮಾ ಹರೀಶ್ ಹೋರಾಟ ಮಾಡಿದ್ದರು ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದು ಅಂಬರೀಶ್ ಅಭಿಮಾನಿಗಳು ಒತ್ತಾಯಿಸಿದ್ದರು. ಜೊತೆಗೆ ಬಿಬಿಎಂಪಿ ಕಚೇರಿಗೆ ತೆರಳಿ ಅಂಬರೀಶ್ ಸಂಘಟನೆಗಳು ಈ ಬಗ್ಗೆ ಮನವಿ ಸಲ್ಲಿಸಿದ್ದರು. ಆದರೆ ಇದೀಗ ಬಿಬಿಎಂಪಿಯಿಂದ ಪುನೀತ್ ರಾಜ್​ಕುಮಾರ್ ಹೆಸರಿಡಲು ಅನುಮೋದನೆ ಸಿಕ್ಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button