Latestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಮುಖ್ಯಮಂತ್ರಿ ಮೇಲೆ ವಿಶ್ವಾಸ ಇದೇ ನಮ್ಮ ಬೇಡಿಕೆ ಈಡೇರುತ್ತೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರು ಬಾರಿ ಶಾಸಕ ಆಗಲು ಪಂಚಮಸಾಲಿ ಸಮಾಜದ ಆರ್ಶೀವಾದ ಇದೆ. ಹಾಗಾಗಿ ನಮ್ಮ ಸಮಾಜವನ್ನು ಮುಖ್ಯಮಂತ್ರಿಗಳು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಮಾಜದ ಮುಖಂಡ ಶಾಸಕ ಬಸನಗೌಡ ಯತ್ನಾಳ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಅದಕ್ಕೆ ಕಳೆದ ದಿನ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ. ಒಂದು ರೀತಿ ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದನ್ನು ನಾವು ಗಮನಿಸಿದ್ದೇವೆ. ಅದರಂತೆ ಯತ್ನಾಳ ಅವರು ಬೆಳಗಾವಿಗೆ ಬಂದು ಈ ಬಗ್ಗೆ ಸಮೂದಾಯದ ಜನರಿಗೆ ತಿಳಿಸಿದ್ದಾರೆ. ಬರುವ ಅಕ್ಟೋಬರ್ 1 ರೊಳಗಾಗಿ ಸಮಾಜಕ್ಕೆ ಮೀಸಲಾತಿ ನೀಡಬೇಕು. ಇಲ್ಲವಾದರೇ ಯಾವುದೇ ಮನವಿ ಚರ್ಚೆಗೆ ಅವಕಾಶವಿಲ್ಲ‌. ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಾಗುವುದು ಎಂದು ಎಚ್ಚರಿಕೆ ನೀಡಿದರು.

ಲಿಂಗಾಯತ ಪಂಚಮಸಾಲಿಗಳ ಮಕ್ಕಳ ಮುಂದಿನ ಪೀಳಿಗೆಗೊಸ್ಕರ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಐತಿಹಾಸಿಕ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ. ಅದಾದನಂತರ ಪ್ರಪಂಚಕ್ಕೆ ಪಂಚಮಸಾಲಿಗಳ ಒಗ್ಗಟ್ಟಿನ ಬಲಪ್ರದರ್ಶನ ತೋರಿಸಲಾಗಿದೆ. ಆಗ ಸಿಎಂ ಸೆ.15 ರೊಳಗೆ ಮೀಸಲಾತಿ ಜಾರಿ ಕುರಿತು ಕಾಲಾವಧಿ ಕೇಳಿದರು. ಈಗ ಅವಧಿಯು ಮುಗಿಯುತ್ತಾ ಬರುತ್ತಿದೆ. ಹಾಗಾಗಿ ಸಮಾಜದ ಜನರನ್ನು ಎಚ್ಚರಿಸಲು ಅಗಸ್ಟ್ 26ರಿಂದ ಮಲೈ ಮಾದೇಶ್ವರ ಬೆಟ್ಟದಿಂದ ಕರ್ನಾಟಕದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ರಾಜ್ಯಮಟ್ಟದ ಬೃಹತ್ ಅಭಿಯಾನ ಏರ್ಪಡಿಸಲಾಗುತ್ತಿದೆ ಎಂದರು.

ಇಂದು 31ನೇ ದಿನಕ್ಕೆ ಅಭಿಯಾನ ಕಾಲಿಟ್ಟಿದ್ದು, ಹು-ಧಾ ಮಹಾನಗರದ ಜಿಲ್ಲಾಮಟ್ಟದಲ್ಲಿ ಪಂಚಮಸಾಲಿ ಪ್ರತಿಜ್ಞಾವಿಧಿ ನಡೆಯುತ್ತದೆ. ಅಭಿಯಾನದಲ್ಲಿ ಅನೇಕ ಚರ್ಚೆ ಮಾಡಿ ಮೀಸಲಾತಿ ಪಡೆಯಲು ಮುಂದಿನ ರೂಪುರೇಷೆ ಸಿದ್ದಗೊಳಿಸಲಾಗುವುದ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button