
ಬೆಂಗಳೂರು:ದೇವಸ್ಥಾನಗಳಲ್ಲಿ ಭಾರಿ ಘಂಟೆಯ ಶಬ್ದವಾದ್ರೆ ಬೀಳುತ್ತೆ ಜೇಬಿಗೆ ಕತ್ತರಿ. ಈಗಾಗಲೇ ನಗರದಲ್ಲಿ ಕೆಲ ದೇವಾಲಯಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ನಗರದ ಪ್ರಸಿದ್ಧ ದೇವಸ್ಥಾನ ದೊಡ್ಡ ಗಣಪತಿ ದೇಗುಲ ಸಮೂಹಕ್ಕೆ ನೋಟಿಸ್ ನೀಡಲಾಗಿದೆ.
ದೇವಾಲಯದಲ್ಲಿ ಡೆಸಿಬಲ್ ಶಬ್ಧಕ್ಕಿಂತ ಹೆಚ್ಚಿನ ಶಬ್ದವನ್ನು ಬಳಸುತ್ತಿರುವುದಕ್ಕೆ ಪೊಲೀಸ್ ನೋಟಿಸ್ ನೀಡಲಾಗಿದೆ. ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶಬ್ದದ ಘಂಟೆ ಹೊಡೆಯದಂತೆ ಬಸವನಗುಡಿಯ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೂಚನೆಯ ಹೊರತಾಗಿಯೂ ಹೆಚ್ಚಿನ ಶಬ್ದ ಬರುವಂತೆ ಘಂಟೆ ಹೊಡೆದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಚ್ಚರಿಕೆ ನೀಡಲಾಗಿದೆ.
ಇನ್ನು ದೊಡ್ಡ ಗಣೇಶ ದೇವಸ್ಥಾನ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ಸೂಚನೆ ನೀಡಲಾಗಿದೆ.



