ಗುವಾಹಟಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗೆ ಪೊಲೀಸರು ಎನ್‌ಕೌಂಟರ್ ಮಾಡಿರುವ ಘಟನೆ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದಿದೆ.
ಬಿಕಿ ಅಲಿ(20) ಹಾಗೂ ರಾಜೇಶ್ ಮುಂಡಾ (38) ಆರೋಪಿಗಳನ್ನ ಪೊಲೀಸರು ಗುಂಡು ಹಾರಿಗೆ ಹತ್ಯೆ ಮಾಡಿದ್ದಾರೆ. ಆರೋಪಿಗಳನ್ನ ಮಹಜರು ಮಾಡಲು ಗುವಾಹಟಿಯ ಹೊರವಲಯದಲ್ಲಿ ಘಟನೆ ನಡೆದ ಸ್ಥಳಕ್ಕೆ ಕರೆ ತಂದಿದ್ದರು. ಆದರೆ ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನ ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗುವಾಹಟಿ ಎಸ್ಪಿ ಅಭಿಜಿತ್ ಶರ್ಮಾ ಬಿಕಿ ಅಲಿ ದೇಹದ ನಾಲ್ಕು ಭಾಗಗಳಲ್ಲಿ ಗಾಯದ ಗುರುತುಗಳಾಗಿವೆ. ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮತ್ತೋರ್ವ ಆರೋಪಿ ಪೊಲೀಸರ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಘಟನೆ ವಿವರ
ಫೆ.16ರಂದು ಸಂತ್ರಸ್ತ ಬಾಲಕಿಯ ಮೇಲೆ ಆರೋಪಿಗಳು ಅತ್ಯಾಚಾರವೆಸಗಿದ್ದಾಗಿ ಯುವತಿಯ ಕುಟುಂಬಸ್ಥರು ದೂರಿನಲ್ಲಿ ದಾಖಲಿಸಿದ್ದಾರು. ಅಲ್ಲದೆ, ವಿಷಯ ಹೊರಗೆ ತಿಳಿಸಿದರೆ, ಚಿತ್ರೀಕರಿಸಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. .
ಫೆ.19ರಂದು ಯುವತಿಗೆ ಕರೆ ಮಾಡಿದ ಆರೋಪಿಗಳು ವಿಡಿಯೋ ಡಿಲೀಟ್ ಮಾಡೋದಾಗಿ ಹೋಟೆಲ್ ಗೆ ಕರೆಸಿ ಮತ್ತೆ ಅತ್ಯಾಚಾರ ಎಸಗಿದ್ದಾಗಿ ಯುವತಿಯ ಕುಟುಂಬಸ್ಥರು ದೂರಿನಲ್ಲಿ ದಾಖಲಿಸಿದ್ದಾರೆ. ಆಲಿ ಹಾಗೂ ನಾಲ್ವರು ಆರೋಪಿಗಳು 16 ವರ್ಷದ ಯುವತಿಯನ್ನ ಅತ್ಯಾಚಾರ ಎಸಗಿದ್ದರು. ಸದ್ಯ ಆರೋಪಿಗಳ ವಿರುದ್ಧ ಪೋಕ್ಸ್ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದು ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



