
ಮಠಾಧಿಪತಿಗಳಿಗೆ ಒಂದು ಮನವಿ.. ನೀವು ಮುಖ್ಯಮಂತ್ರಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದ್ದೀರಿ. ಯಾಕೆ ಎಂದು ಕೇಳಬಹುದೆ ? ಯಡಿಯೂರಪ್ಪ ನಿಮ್ಮ ಜಾತಿಯವರು ಎಂದು ಅವರ ಬೆಂಬಲಕ್ಕೆ ನೀವು ನಿಂತಿದ್ದರೆ ಬಸವಣ್ಣನ ತತ್ವಗಳನ್ನು ಸಮಾಧಿ ಮಾಡುತ್ತಿದ್ದೀರಿ. ಬಸವಣ್ಣ ಜಾತಿ ರಹಿತ ಸಮಾಜದ ಕನಸು ಕಂಡಿದ್ದ. ನೀವು ಜಾತಿ ಪೂಜಕರಾಗಿದ್ದೀರಿ.. ನೀವು ನಿಜವಾಗಿ ಬಸವಣ್ಣನ ಅನುಯಾಯಿಗಳಾಗಿದ್ದರೆ ಎಲ್ಲ ರಾಜಕೀಯ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ದಲಿತ ಸಮುದಾಯದವರಾಗಿರಲಿ ಎಂದು ಒತ್ತಾಯ ಮಾಡಿ, ಎಲ್ಲ ರಾಜಕೀಯ ಪಕ್ಷಗಳು ದಲಿತ ಮುಖ್ಯಮಂತ್ರಿ ಘೋಷಣೆ ಮಾಡುವಂತೆ ಒತ್ತಡ ಹೇರಿ.. ಇದು ಸಾಧ್ಯವಿಲ್ಲದಿದ್ದರ ಬಸವಣ್ಣನವರ ಹೆಸರು ಹೇಳುವುದನ್ನು ಇಂದೇ ನಿಲ್ಲಿಸಿ.. ಇದು ನನ್ನ ಹಕ್ಕೋತ್ತಾಯ,, ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ



