ಪಾಟ್ನಾ: ಮದುವೆ ಬಗ್ಗೆ ಹುಡುಗ- ಹುಡುಗಿ ಸಾಕಷ್ಟು ಕನಸು ಹೊತ್ತುಕೊಂಡಿರುತ್ತಾರೆ. ಆದರಲ್ಲೂ ಮದುವೆ ಇದೆ ರೀತಿ ನಡೆಯಬೇಕು ಹೀಗೆ ಇರಬೇಕು ಅಂತಾ ಎಲ್ಲರೂ ಅಂದುಕೊಂಡಿರುತ್ತಾರೆ. ಹೀಗಿರುವಾಗ ಇನ್ನೇನು ಮದುವೆ ಸಂಭ್ರಮದಲ್ಲಿದ್ದಾಗ ಏನಾದ್ರೂ ವ್ಯತ್ಯಾಸವಾಗಿ ಆದೆಷ್ಟೋ ಮದುವೆಗಳು ಮುರಿದುಕೊಂಡು ಬಿದ್ದಿದೆ. ಇದೀಗ ಅದೇ ರೀತಿ ಇಲ್ಲೊಬ್ಬ ವರ ಊಟ ಬಡಿಸುವುದು ತಡವಾಗಿದೆ ಎಂದು ಮದುವೆಯನ್ನು ಮುರಿದುಕೊಂಡು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಹೌದು ಪುರ್ನಿಯಾದ ಮೊಹಾನಿ ಪಂಚಾಯತ್ ನ ಬಟೌನಾ ಗ್ರಾಮದ ಈಸ್ಟರಿ ಟೋಲಾದಲ್ಲಿ ವರನೊಬ್ಬ ತನ್ನ ಕುಟುಂಬಕ್ಕೆ ತಡವಾಗಿ ಊಟ ಬಡಿಸಿದ್ದಾರೆ ಎಂಬ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದರಿಂದ ವರನ ಕುಟುಂಬದ ಸದಸ್ಯರಿಗೆ ಊಟ ಬಡಿಸಲು ತಡವಾಗಿದೆ.
ಈ ಹಿನ್ನೆಲೆಯಲ್ಲಿ ವರನ ತಂದೆಯನ್ನು ತುಂಬಾ ಕೆರಳಿಸಿತು, ಅವರು ಮದುವೆ ಸಮಾರಂಭದಲ್ಲಿ ನಾನು ಇರುವುದಿಲ್ಲ, ಮನೆಗೆ ಹೋಗುತ್ತೇನೆ ಎಂದು ಹೇಳುತ್ತ ಸಿಟ್ಟಾಗಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಪಂಚಾಯಿತಿಯವರು ಮಧ್ಯ ಪ್ರವೇಶಿಸಿ ಎರಡು ಕಡೆಯವರ ನಡುವೆ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದರು. ವಧುವಿನ ತಾಯಿ ಇದೀಗ ವರ ಮತ್ತು ಆತನ ತಂದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



