Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಕಲ್ಲು ತೂರಾಟ ನಡುವೆ ಶಿವಲಿಂಗ ಪೂಜೆ ನೇರವೇರಿಸಿದ ಬಿಜೆಪಿ ಮುಖಂಡರು

ಕಲಬುರಗಿ: ಕಲ್ಲು ತೂರಾಟದ ನಡುವೆಯೂ ದರ್ಗಾದಲ್ಲಿರೋ ರಾಘವ ಚೈತನ್ಯ ಲಿಂಗಕ್ಕೆ ಬಿಜೆಪಿ ಮುಖಂಡರು ಪೂಜೆ ಮಾಡಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ ಪಾಟೀಲ್, ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಜನರ ತಂಡ ದರ್ಗಾದೊಳಗೆ ಹೋಗಿ ಪೂಜೆ ಮಾಡಿ ಹೊರಬಂದಿದ್ದಾರೆ.
ಆಳಂದ ಪಟ್ಟಣದ ಲಾಡ್ಲೆ ಮಶಾಕ ದರ್ಗಾದಲ್ಲಿ ಶಿವಲಿಂಗವಿದ್ದು ಮುಖಂಡರು ಪೂಜೆ ಮಾಡಿದ್ದಾರೆ. ಇದೆ ವಿಷಯವಾಗಿ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇಂದು ದರ್ಗಾ ಮುಂದೆ ಮುಸ್ಲಿಂ ಸಮುದಾಯ ಒಂದಡೆ ಸೇರಿದ್ದರು. ಕಲ್ಲು ತೂರಾಟ ಕೂಡಾ ನಡೆಯಿತು. ಹಲವು ವಾಹನಗಳು ಜಖಂಗೊಂಡಿವೆ.
ಆದ್ರೆ ಕಲ್ಲು ತೂರಾಟದ ನಡುವೆಯೂ ಬಿಜೆಪಿ ಮುಖಂಡರು ಒಳಹೋಗಿ ಶಿವಲಿಂಗ ಪೂಜೆ ನೇರವೇರಿಸಿ ಹೊರಬಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
