Latestಮನರಂಜನೆಸಿನಿಮಾಸೆಲೆಬ್ರಿಟಿ

ಅಜಯ್​ ದೇವಗನ್​​ಗಿಂತ ದುಪ್ಪಟ್ಟು ಸಂಭಾವನೆ ಪಡೆದ ಆಲಿಯಾ ಭಟ್

ಬಿಟೌನ್​ನಲ್ಲಿ ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದ್ದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇಂದು ದೇಶಾದ್ಯಂತ ರಿಲೀಸ್ ಆಗಿದೆ. ಚಿತ್ರದ ಆರಂಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿ ಬಿಡುಗಡೆಯ ಹಿಂದಿನ ದಿನವೂ ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದ್ದ ಸಿನಿಮಾ ಥಿಯೇಟರ್​​ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ಅಜಯ್ ದೇವ್​ಗಾನ್, ಹುಮಾ ಕುರೇಷಿ ಸೇರಿದಂತೆ ಸಾಕಷ್ಟು ಮಂದಿ ಕಾಣಿಸಿಕೊಂಡಿದ್ದಾರೆ. ಆದ್ರೆ ಇಡೀ ಸಿನಿಮಾ ಸದ್ದು ಮಾಡ್ತಿರೋದು ನಟಿ ಆಲಿಯಾ ಭಟ್ ಹೆಸರಿನಿಂದ.

ಅಂದ್ಹಾಗೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗೆ ಆಲಿಯಾ ಭಟ್ ಪಡೆದುಕೊಂಡಿರುವ ಸಂಭಾವನೆ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.
ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಟ್ರೈಲರ್​ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದ ಆಲಿಯಾ ಭಟ್ ಥಿಯೇಟರ್​​ನಲ್ಲೂ ಸಿನಿ ರಸಿಕರ ಮನಸ್ಸು ಗೆದಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾಗೆ ಆಲಿಯಾ ಭಟ್ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.

ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿರುವ ನಟ ಅಜಯ್ ದೇವಗನ್ 11 ಕೋಟಿ ಸಂಭಾವನೆ ಪಡೆದಿದ್ದಾರೆ. ಆಲಿಯಾ ಅಜಯ್​ಗಿಂತ ದುಪ್ಪಟ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಉಳಿದಂತೆ ನಟ ವಿಜಯ್ ರಾಜ್ 1.5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿಕೊಟ್ಟಿರುವ ಶಂತನು ಮಹೇಶ್ವರಿ 50 ಲಕ್ಷ ಹಾಗೂ ಹುಮಾ ಖುರೇಷಿ 2 ಕೋಟಿ ಫೀಸ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರ ಹುಸೇನ್ ಜೈದಿಯವರ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕದ ಅಧ್ಯಾಯನ ಆಧರಿಸಿದ್ದು ಚಿತ್ರದಲ್ಲಿ ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button