Latestಚಿಕ್ಕಮಗಳೂರುಜಿಲ್ಲಾ ಸುದ್ದಿ
ದೇಗುಲದ ಒಳಹೋದ ಬಿಕ್ಷುಕಿ ಕೊಟ್ಟಿದ್ದೇನು? : ‘ಮುಂದೆ ಹೋಗಮ್ಮಾ’ ಎಂದವರು ದಂಗಾಗಿದ್ದೇಕೆ?

ಚಿಕ್ಕಮಗಳೂರು: ದೇಗುಲದ ಆವರಣದಲ್ಲಿ ಕಾಣಿಸಿಕೊಂಡ ಭಿಕ್ಷುಕಿ ಅಜ್ಜಿಯೋರ್ವರನ್ನು ಅಲ್ಲಿನ ಜನ ಮುಂದೆ ಹೋಗಮ್ಮಾ ಎಂದಿದ್ದಾರೆ. ಆದರೆ ಆಕೆ ದೇವಸ್ಥಾನ ಸಮಿತಿ ಅಧ್ಯಕ್ಷರನ್ನು ಹುಡುಕಾಡುತ್ತಿರುವುದು ಗೊತ್ತಾಯಿತು. ಅವರಿಂದಲೇ ಹಣ ಕೇಳಲು ಬಂದಿರಬಹುದೆಂದು ಅಜ್ಜಿಯನ್ನು ಜನ ಹೊರಗೆ ಓಡಿಸಲು ಮುಂದಾಗಿದ್ದರು.
ಆದರೆ ಆಕೆ ಸೀದಾ ದೇಗುಲದ ಒಳಗೆ ಹೋಗಿ ಅಲ್ಲಿದ್ದ ಸಮಿತಿಯವರಿಗೆ ರೂ.500 ಮುಖಬೆಲೆಯ 40 ನೋಟುಗಳು (20 ಸಾವಿರ) ಕೊಟ್ಟು ಈ ಹಣದಲ್ಲಿ ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಬೇಡಿಕೆ ಮುಂದಿಟ್ಟಾಗ ಸ್ಥಳೀಯರು ದಂಗಾಗಿ ಹೋದರು. ಆವರಣದಲ್ಲಿ ಆಕೆಯನ್ನು ಓಡಿಸಲು ಮುಂದಾಗಿದ್ದವರು ಈ ಅಜ್ಜಿಯ ಎದುರು ತಲೆತಗ್ಗಿಸಬೇಕಾಯಿತು.
ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇಗುಲದಲ್ಲಿ ನಡೆದ ಘಟನೆಯಿದು. ಕಡೂರಿನ ಸಾಯಿಬಾಬಾ ದೇಗುಲದ ಬಳಿ ಭಿಕ್ಷೆ ಬೇಡುತ್ತಿದ್ದ ಕೆಂಪಜ್ಜಿ 20 ಸಾವಿರ ರೂಪಾಯಿ ದೇಣಿಗೆ ನೀಡಿದರು. ಬೇರೆಯವರು ನೀಡುವ ಲಕ್ಷಾಂತರ ದೇಣಿಗೆಗಿಂತ ಇದು ದೊಡ್ಡದು ಎಂದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.



