
ಶಿಲ್ಲಾಂಗ್ : ಪ್ರಯಾಣಿಕರ ತೆರಳುತ್ತಿದ್ದ ಬಸ್ ನದಿಗೆ ಉರುಳಿ ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮೇಘಾಲಯ ರಾಜ್ಯದ ನೊಂಗೊಚ್ರಾಮ್ ಬಳಿ ನಡೆದೆ.
ತಡರಾತ್ರಿ 12 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ರಿಂಗ್ಡಿ ನದಿಗೆ ಬಸ್ ಉರುಳಿ ಬಿದ್ದಿದೆ. ಪರಿಣಾಮ 6 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 16 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
21 ಪ್ರಯಾಣಿಕರನ್ನು ಹೊತ್ತಿದ್ದ ಬಸ್ ತುರಾದಿಂದ ಶಿಲ್ಲೊಂಗ್ ಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಸ್ ಉರುಳಿ ಬಿದ್ದಿದೆ.



