ಬಿಳಿಗಿರಿರಂಗನ ಬೆಟ್ಟದ ಮಡಿಲಲ್ಲಿ 15ನೇ ಶತಮಾನದ 3 ಸ್ಮಾಶನಗಳು ಪತ್ತೆ!

ಬಿಳಿಗಿರಿ ರಂಗನಾಥಸ್ವಾಮಿ ದೇವಲಾಯದ ಬೆಟ್ಟಗಳಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಅಧ್ಯಯನ ತಂಡ ಸಂಶೋಧನೆ ನಡೆಸುತ್ತಿರುವಾಗ 15ನೇ ಶತಮಾನದವು ಎನ್ನಲಾದ 3 ಸ್ಮಾಶಾನಗಳು ಪತ್ತೆಯಾಗಿವೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ವಿ ಶೋಭಾ ನೇತೃತ್ವದ ಸಂಶೋಧನಾ ತಂಡವು ಈ ಸ್ಮಶಾನಗಳನ್ನು ಪತ್ತೆ ಹಚ್ಚಿದೆ.
ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಾಮರಾಜನಗರ ತಾಲೂಕಿನ ಭೂದಿಪಡಗ ಗ್ರಾಮದಲ್ಲಿ ಸಂಶೋಧನಾ ತಂಡವು ಮೂರು ಸ್ಮಶಾನಗಳನ್ನು ಪತ್ತೆ ಮಾಡಿದೆ. ಇವು ಕ್ರಿಸ್ತ ಪೂರ್ವ 15ನೇ ಶತಮಾನದವೆಂದು ನಂಬಲಾಗಿದೆ.ಪುರಾತತ್ವ ತಜ್ಞರು ಗತಕಾಲದ ಹೆಚ್ಚಿನ ಅವಶೇಷಗಳನ್ನು ಕಂಡುಹಿಡಿಯಲು ಈ ಪ್ರದೇಶದಲ್ಲಿ ಉತ್ಖನನ ಮಾಡುತ್ತಿದ್ದಾರೆ.
ಈ ಮೂರು ಸ್ಮಶಾನಗಳು ಬೆಟ್ಟಗಳ ಮೇಲಿನ ಕೃಷಿ ಭೂಮಿಯಿಂದ ಸುಮಾರು 300 ಮೀಟರ್ ದೂರದಲ್ಲಿ ಕಂಡು ಬಂದಿವೆ. ಈ ಪ್ರದೇಶದಲ್ಲಿ ಸಂಶೋಧನಾ ತಂಡಕ್ಕೆ ಮಡಕೆಗಳ ಮುರಿದ ತುಂಡುಗಳು ಮತ್ತು ಕಲ್ಲಿನ ಕೆತ್ತನೆಗಳು ಸಿಕ್ಕಿವೆ. ಈ ಸ್ಥಳದಲ್ಲಿ ಅತಿದೊಡ್ಡ ಸಮಾಧಿ 9 ಮೀಟರ್ ಅಳತೆ ಮತ್ತು 4.5 ಮೀಟರ್ ನ ಅತಿ ಚಿಕ್ಕ ಸಮಾಧಿ ಸಿಕ್ಕಿದೆ.



