
ಬೆಂಗಳೂರು: 2022ರ ಪ್ರೋ ಕಬ್ಬಡಿ ಲೀಗ್ ನಡೆಯುತ್ತಿದೆ. ಇದೀಗ ಅವರಿಗೆ ಕೊರೊನಾ ಬಿಸಿ ತಟ್ಟಿದೆ. ಹೌದು ಕಬ್ಬಡಿ ಟೂರ್ನಿಯಲ್ಲಿ ಭಾಗಿಯಾಗಿರುವ ಎರಡು ಫ್ರಾಂಚೈಸಿಗಳ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆ.
ಕೊರೊನಾ ಹೆಚ್ಚಳದಿಂದ ಪ್ರೇಕ್ಷಕರಿಗೆ ಪ್ರವೇಶ ನೀಡದೆ ಬಿಗಿ ಭದ್ರತೆಯಲ್ಲಿ ಪಂದ್ಯಗಳನ್ನು ನಡೆಸಲಾಗಿದೆ. ಇನ್ನು ಟೂರ್ನಿಯಲ್ಲಿ ಭಾಗಿಯಾಗಿರುವ ಆಟಗಾರರು, ಸಿಬ್ಬಂದಿಗೆ ಅವಕಾಶ ನೀಡಲಾಗಿದೆ. ಆದ್ರೆ ಪಂದ್ಯಕ್ಕೆ ಯಾರು ಪ್ರವೇಶವಿಲ್ಲದಿದ್ದರು ಕೂಡ ಆಟಗಾರರಿಗೆ ಕೊರೊನಾ ದೃಢಪಟ್ಟಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನ ಶೆರಟಾನ್ ಹೊಟೇಲ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ ಸೋಂಕಿತರು ಚಿಕಿತ್ಸೆ ನೀಡಿ ಐಸೋಲೇಷನ್ ಒಳಪಡಿಸಲಾಗಿದೆ. ಅವರ ಸಂಪರ್ಕದಲ್ಲಿದ್ದವರಿಗೂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಮುಂದಿನ ವಾರದಿಂದ ಪ್ರೋ ಕಬ್ಬಡಿ ಟೂರ್ನಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ



